
ಪ್ರಗತಿವಾಹಿನಿ ಸುದ್ದಿ: ಪ್ರೇಯಸಿ ಮಾತು ಕೇಳಿ ಬಿಜೆಪಿ ನಾಯಕ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ರೋಹಿತ್ ಸೈನಿ ಪತ್ನಿಯನ್ನೇ ಹತ್ಯೆಗೈದಿರುವ ಬಿಜೆಪಿ ನಾಯಕ. ಆಗಸ್ಟ್ 10ರಂದು ರಾಜಸ್ಥಾನದ ಅಜ್ಮೀರ್ ನಲ್ಲಿ ರೋಹಿತ್ ಸೈನಿ ಪತ್ನಿ ಕೊಲೆಯಾಗಿತ್ತು. ಆರಂಭದಲ್ಲಿ ದರೋಡೆ ಎಂದು ಬಿಂಬಿತವಾಗಿತ್ತು. ಆದರೆ ರೋಹಿತ್ ಪತ್ನಿ ಸಂಜು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು.
ರೋಹಿತ್ ಸೈನಿ ಆರಂಭದಲ್ಲಿ ತನ್ನ ಪತ್ನಿಯನ್ನು ದರೋಡೆಕೋರರು ಹತ್ಯೆಗೈದು ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಹೇಳಿಕೆಗೊಟ್ಟಿದ್ದ. ಅನುಮಾನಗೊಂಡ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದು, ರೋಹಿತ್ ಗೆಳತಿ ರಿತುಳನ್ನು ಬಂಧಿಸಿದ್ದರು. ಬಳಿಕ ವಿಚಾರಣೆ ವೇಳೆ ತಾನೇ ಪತ್ನಿಯನ್ನು ಕೊಲೆ ಮಾಡಿದ್ದಾಗಿ ರೋಹಿ ತಪ್ಪೊಪ್ಪಿಕೊಂಡಿದ್ದಾನೆ.
ತನ್ನ ಗೆಳತಿ ರಿತು ಒತ್ತಾಯಕ್ಕೆ ತಾನು ಪ್ಲಾನ್ ಮಾಡಿ ಪತ್ನಿಯನ್ನು ಕೊಲೆಗೈದಿರುವುದಾಗಿ ರೋಹಿತ್ ತಿಳಿಸಿದ್ದಾನೆ. ತಾನು ಹಾಗೂ ರಿತು ಹಲವು ವರ್ಷಗಳಿಂದ ಸಂಬಂಧ ಹೊಂದೆದಿಇವೆ. ಆದರೆ ಪತ್ನಿ ಸಂಜು ತಮ್ಮ ಮಧ್ಯೆ ಗೋಡೆಯಾಗಿದ್ದಳು. ಹಾಗಾಗಿ ಆಕೆಯನ್ನು ಹೇಗಾದರೂ ಮಾಡಿ ಬದುಕಿನಿಂದ ದೂರವಾಗಿಸಬೇಕು ಎಂದು ರಿತು ಒತ್ತಡ ಹಾಕಿದ್ದಳು. ಇದೇ ಕಾರಣಕ್ಕೆ ಸಂಚು ರೂಪಿಸಿ ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾನೆ.