Kannada NewsKarnataka NewsPolitics

*ಇಡೀ ದೇಶದಲ್ಲಿ ಬಿಜೆಪಿಗರು ಪ್ರಾಮಾಣಿಕರು: ಲೇವಡಿ ಮಾಡಿದ ಡಿಕೆಶಿ*

ಪ್ರಗತಿವಾಹಿನಿ ಸುದ್ದಿ: ಗುತ್ತಿಗೆದಾರನಿಂದ ಐದು ಲಕ್ಷ ರೂಪಾಯಿ ಲಂಚ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಶಾಸಕ ಚಂದ್ರು ಲಮಾಣಿ ಬಿದ್ದಿದ್ದು ‘ಬಿಜೆಪಿಯವರು ಪರಿಶುದ್ಧರು ಎಂದು ಬಿಜೆಪಿ ನಾಯಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ ಲೇವಡಿ ಮಾಡಿದ್ರು. 

ಶಾಸಕ ಚಂದ್ರು ಲಮಾಣಿ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ವಿಚಾರವಾಗಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಬಿಜೆಪಿಗರು ಪ್ರಾಮಾಣಿಕರು ಎಂದು ಡಿಸಿಎಂ ಅವರು ಲೇವಡಿ ಮಾಡಿದರು.

ಬಿಜೆಪಿಯವರು ಈ ದೇಶದಲ್ಲಿ ಅತ್ಯಂತ ಪ್ರಾಮಾಣಿಕ ಜನ. ಬಹುಶಃ ನಿಮಗೆ ತಪ್ಪು ಮಾಹಿತಿ ಸಿಕ್ಕಿರಬಹುದು. ಲೋಕಾಯುಕ್ತರು ಸ್ಪಷ್ಟನೆ ನೀಡಲಿ, ನಂತರ ನಾನು ಉತ್ತರಿಸುತ್ತೇನೆ ಎಂದು ವ್ಯಂಗ್ಯವಾಡಿದರು.

ಚಂದ್ರು ಲಮಾಣಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಕುರಿತು ಹೆಚ್ಚಿನ ಮಾಹಿತಿ ಗೊತ್ತಿಲ್ಲ, ತಿಳಿದುಕೊಂಡು ಮಾತನಾಡುವೆ. ಲೋಕಾಯುಕ್ತ ಅಧಿಕಾರಿಗಳು ಕಾನೂನು ಪ್ರಕಾರ ಅವರ ತನಿಖೆಯನ್ನು ಮಾಡುತ್ತಾರೆ ಎಂದು ಹೇಳಿದರು.

Home add -Advt

Related Articles

Back to top button