Belagavi NewsBelgaum NewsKannada NewsKarnataka NewsPolitics

*ಸಂಗೊಳ್ಳಿ ರಾಯಣ್ಣ ಮೂರ್ತಿ ಮೇಲೆ ಕಪ್ಪು ಮಸಿ ವಿವಾದ: ಲ್ಯಾಬ್ ವರದಿ ಬಹಿರಂಗ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಫೆ 19 ರಂದು ಕಿಡಿಗೇಡಿಗಳು ಯಾವುದೋ ಕಪ್ಪು ಪದಾರ್ಥವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ಹಾಕಿದ್ದಾರೆ ಎಂಬ ಮಾಹಿತಿ ಬಂದಾಗ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಕಪ್ಪು ಕಲೆಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಿದ್ದು, ಇದೀಗ ವರದಿ ಬಹಿರಂಗವಾಗಿದೆ.‌

ಮೂರ್ತಿಯ ಹತ್ತಿರದ ರಸ್ತೆ ಹಾಗೂ ಮೂರ್ತಿಯ ಸ್ವಲ್ಪ ಮೇಲಿರುವ ಮರದ ಎಲೆಯ ಅಂಟು ಪದಾರ್ಥವನ್ನು ಸಂಗ್ರಹಿಸಿ ಆರ್‌ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು, ವರಿದಿಯಂತೆ ಮೂರೂ ಕಡೆಗೆ ಸಂಗ್ರಹಿಸಿದ ಶಾಂಪಲ್‌ಗಳು ಮರದ ಅಂಟು ದ್ರಾವಣವಾಗಿರುತ್ತವೆ (Component Of Plant Resin) ಎಂದು ಆರ್‌ಎಫ್‌ಎಸ್‌ಎಲ್ ವರದಿ ನೀಡಿದೆ.

ಆದ್ದರಿಂದ ಮಸಿ ಎಂದು ಊಹಿಸಿದ ದ್ರವ ಪ್ರದಾರ್ಥವು ಮೂರ್ತಿಯ ಹತ್ತಿರವಿದ್ದ ಮರದ ಎಲೆಯ ಅಂಟು ಪದಾರ್ಥವಾಗಿರುವ ಬಗ್ಗೆ ಪರೀಕ್ಷೆಗಳಿಂದ ದೃಢಪಟ್ಟಿರುತ್ತದೆ. ಆದರೆ ಇದು ಯಾವುದೇ ಕಿಡಿಗೇಡಿಗಳ ಕೃತ್ಯವಾಗಿರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button