Kannada NewsNationalPolitics

*ಬಿಜೆಪಿ ಶಾಸಕಿ ಕಾರು ಅಪಘಾತ: ಸ್ಥಿತಿ ಚಿಂತಾಜನಕ*

ಪ್ರಗತಿವಾಹಿನಿ ಸುದ್ದಿ: ರಾಜಸ್ಥಾನದ ರಾಜಸಮಂದ್ ಕ್ಷೇತ್ರ ಬಿಜೆಪಿ ಶಾಸಕಿ ದೀಪ್ತಿ ಕಿರಣ್‌ ಮಹೇಶ್ವರಿ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಅವರಿಗೆ ಗಂಭೀರಗಾಯವಾಗಿದೆ. 

ರಾಜಸ್ಥಾನದ ಉದಯಪುರ- ರಾಜಸಮಂಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಾಜ್ಯಮಂದ್ ಶಾಸಕಿ ದೀಪ್ತಿ ಕಿರಣ್‌ ಮಹೇಶ್ವರಿ ಗಂಭೀರ ಗಾಯಗೊಂಡಿದ್ದು, ಅವರನ್ನು ICUಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ಘಟನೆಯು ಶುಕ್ರವಾರ ತಡರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ. ಉದಯಪುರದ ಅಂಬೆರಿ ಬಳಿ ತಿರುವು ಪಡೆಯುತ್ತಿದ್ದಾಗ ಗುಜರಾತ್ ನೋಂದಣಿಯ ಕಾರೊಂದು ವೇಗವಾಗಿ ಬಂದು ಶಾಸಕಿ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಹೇಶ್ವರಿ ಅವರ ಪಕ್ಕೆಲುಬು ಮುರಿತಕ್ಕೊಳಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಐಸಿಯುಗೆ ದಾಖಲಿಸಲಾಗಿದೆ. ಇನ್ನು ಶಾಸಕಿ ಸಹಾಯಕ ಜೈ ಅವರ ತಲೆಗೆ ಗಾಯವಾಗಿದ್ದರೆ, ಚಾಲಕ ಧರ್ಮೇಂದ್ರ ಕೂಡ ಗಾಯಗೊಂಡಿದ್ದಾರೆ. ಮೂವರೂ ಪ್ರಸ್ತುತ ಉದಯಪುರದ ಗೀತಾಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದೀಪ್ತಿ ಕಿರಣ್ ಮಹೇಶ್ವರಿ ಅಥವಾ ದೀಪ್ತಿ ಮಹೇಶ್ವರಿ ಪ್ರಸ್ತುತ ರಾಜಸ್ಥಾನದ ರಾಜಸಮಂದ್ ಕ್ಷೇತ್ರವನ್ನು ಪ್ರತಿನಿಧಿಸುವ 16 ನೇ ರಾಜಸ್ಥಾನ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಾಜಿ ರಾಜಸಮಂದ್ ವಿಧಾನಸಭಾ ಸದಸ್ಯ ಕಿರಣ್ ಮಹೇಶ್ವರಿ ಅವರ ಪುತ್ರಿ ಮತ್ತು ಭಾರತೀಯ ಜನತಾ ಪಕ್ಷದಿಂದ ನಾಮನಿರ್ದೇಶಿತರಾಗಿದ್ದಾರೆ. 

Home add -Advt

Related Articles

Back to top button