Latest

BJP ಶಾಸಕರ ತಾಯಿಯ ಕಿವಿ ಕತ್ತರಿಸಿ ಓಲೆ ಕಿತ್ತುಕೊಂಡು ಪರಾರಿಯಾದ ಕಳ್ಳರು

ಪ್ರಗತಿವಾಹಿನಿ ಸುದ್ದಿ; ಗಾಜಿಯಾಬಾದ್: ಬಿಜೆಪಿ ಶಾಸಕರೊಬ್ಬರ ತಾಯಿಯ ಮೇಲೆ ಹಲ್ಲೆ ನಡೆಸಿದ ಕಳ್ಳರ ಗುಂಪು ಅವರ ಕಿವಿಯನ್ನು ಹರಿದು ಓಲೆ ಕಿತ್ತು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬುಲಂದರ್ ಶಹರ್ ಬಿಜೆಪಿ ಶಾಸಕ ಪ್ರದೀಪ್ ಚೌದರಿ ಅವರ 80 ವರ್ಷದ ತಾಯಿ ಸಂತೋಷಾ ದೇವಿ ಅವರ ಮೇಲೆ ಗಾಜಿಯಾಬಾದ್ ನ ಪ್ರತಾಪ್ ವಿಹಾರ್ ನ ನಡು ರಸ್ತೆಯಲ್ಲಿ ಹಲ್ಲೆ ನಡೆದಿದ್ದು, ದುಷ್ಕರ್ಮಿಗಳು ಅವರ ಕಿವಿಯನ್ನು ಹರಿದು, ಕಿಯಿಯಲ್ಲಿದ್ದ ಓಲೆ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಶಾಸಕರ ತಾಯಿ ವಾಕಿಂಗ್ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಪಿಸ್ತೂಲ್ ನಿಂದ ಸಂತೋಷಾ ದೇವಿಯವರನ್ನು ಬೆದರಿಸಿದ್ದು,  ಕಿವಿಯೋಲೆ ತೆಗೆದುಕೊಡುವಂತೆ ಹೇಳಿದ್ದಾರೆ. ಇದಕ್ಕೆ ಶಾಸಕರ ತಾಯಿ ನಿರಾಕರಿಸುತ್ತಿದ್ದಂತೆ ಅವರ ಕಿವಿಯೋಲೆ ಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಆದರೆ ಕಿವಿಯೋಲೆಗಳು ಕಿತ್ತುಕೊಳ್ಳಲು ಬರದಿದ್ದಾಗ ಕಟರ್ ನಿಂದ ಕಿವಿಯನ್ನೇ ಕತ್ತರಿ ಓಲೆ ಕಿತ್ತು ಪರಾರಿಯಾಗಿದ್ದಾರೆ.

ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲಿಯೇ ಬಿದ್ದ ಸಂತೋಷಾ ದೇವಿಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Home add -Advt

ಶಾಸಕರ ಸಹೋದರ ಜೀತ್ ಪಾಲ್ ಅವರೊಂದಿಗೆ ಪ್ರತಾಪ್ ವಿಹಾರ್ ನಲ್ಲಿ ತಾಯಿ ವಾಸವಾಗಿದ್ದರು. ವಾಕಿಂಗ್ ಹೋಗಿದ್ದ ವೇಳೆ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ನಿಮ್ಮ ವಿರುದ್ಧ ಇಡೀ ರಾಜ್ಯಾದ್ಯಂತ ಮೊಟ್ಟೆ ಹೊಡೆಸಬಲ್ಲೆ; ಸದನದಲ್ಲಿ ಸಿದ್ದರಾಮಯ್ಯ ಆಕ್ರೋಶ

https://pragati.taskdun.com/politics/vidhanasabhesiddaramaiahegg-attackmadikeri/

Related Articles

Back to top button