Latest

ಜನರ ಮೇಲೆ ಹಾಯ್ದ ಬಿಜೆಪಿ ಶಾಸಕನ ಸಂಬಂಧಿ ಕಾರು; ಇಬ್ಬರ ಸಾವು, ನಾಲ್ವರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬಿಜೆಪಿ ಶಾಸಕರೊಬ್ಬರ ಸಂಬಂಧಿಗೆ ಸೇರಿದ SUV ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಜನರ ಮೇಲೆ ಹಾಯ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರಿನ ನೃಪತುಂಗ ರಸ್ತೆಯ ಕೋರ್ಟ್ ಕಾಂಪ್ಲೆಕ್ಸ್ ಜಂಕ್ಷನ್ ಬಳಿ ಈ ಘಟನೆ ಸಂಭವಿಸಿದೆ.

Home add -Advt

ಬಿಜೆಪಿ ಶಾಸಕ ಎಚ್ ಹಾಲಪ್ಪ ಅವರ ಅಳಿಯನ ಹೆಸರಿನಲ್ಲಿ ನೋಂದಣಿಯಾದ SUV ವಾಹನ ನಿಯಂತ್ರಣ ತಪ್ಪಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆಯಿತು. ಇದೇ ವೇಳೆ ಅಲ್ಲಿದ್ದ ಜನರ ಮೇಲೂ ಹಾಯ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಆಟೋಮೊಬೈಲ್ ಬಿಡಿಭಾಗಗಳ ವ್ಯಾಪಾರಿ ಮಜೀದ್ ಖಾನ್ (36) ಮತ್ತು ಪಾರ್ಕಿಂಗ್ ಲಾಟ್ ಮ್ಯಾನೇಜರ್ ಅಯ್ಯಪ್ಪ (60) ಎಂದು ಗುರುತಿಸಲಾಗಿದೆ. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಪರಿಣಾಮ ಕಾರಿನ ಮುಂಭಾಗ ಮತ್ತು ಹಿಂಭಾಗ ಜಖಂಗೊಂಡಿದೆ.

ಕಾರು ಹಾಲಪ್ಪ ಅವರದ್ದಲ್ಲ, ಆದರೆ ಅವರ  ಕುಟುಂಬ ಸದಸ್ಯರಿಗೆ ಸೇರಿದ್ದು, ಅದು ಇನ್ನೂ ಎಂಎಲ್ಎ ಪಾಸ್ ಹೊಂದಿದೆ. ಅಪಘಾತದಿಂದ ಅನೇಕ ಜನರು ರಸ್ತೆಯಲ್ಲಿ ಬಿದ್ದಿರುವುದನ್ನು ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಘಟನೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ವಾಹನದ ಚಾಲಕನನ್ನು ಬಂಧಿಸಲಾಗಿದ್ದು, ಹಾಲಪ್ಪ ಅವರ ಮಗಳನ್ನು ಕರೆತರಲು ತೆರಳಿದ್ದರು ಎನ್ನಲಾಗಿದೆ.  ಚಾಲಕ ಗಡಿಬಿಡಿಯಲ್ಲಿ ಆಕಸ್ಮಿಕವಾಗಿ ಬ್ರೇಕ್ ಬದಲು ಎಕ್ಸಲರೇಟರ್ ಒತ್ತಿದ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಕ್ಕೆ ಡಾ. ಸೋನಾಲಿ ಸರ್ನೋಬತ್ ಸಾಂತ್ವನ

https://pragati.taskdun.com/dr-sonali-sarnobat-visited-the-house-of-a-young-man-who-committed-suicide/

*ಭಯಂಕರ ಭೂಕಂಪಕ್ಕೆ ತತ್ತರಿಸಿದ ಟರ್ಕಿ; 4000 ಜನರು ಸಾವು*

https://pragati.taskdun.com/turkey-earthquakesyria4000-people-death/

ಅಥಣಿ: ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

https://pragati.taskdun.com/athani-the-accused-selling-ganja-was-arrested/

Related Articles

Back to top button