ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಕೌಂಡಲ್ ಗ್ರಾಮದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಮಹಾದೇವ ಸುಭಾಷ್ ಕೋಲೇಕರ್ (17) ಅವರ ನಿವಾಸಕ್ಕೆ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಸೋನಾಲಿ ಸರ್ನೋಬತ್, “ಒಮ್ಮೆ ಇಂತಹ ಘಟನೆಗಳು ನಡೆದರೆ ಕುಟುಂಬಕ್ಕೆ ಕಷ್ಟದ ಪರಿಸ್ಥಿತಿ ಉಂಟಾಗುತ್ತದೆ. ಮಹಾದೇವ ಅವರು ಇಂತಹ ಕಠಿಣ ಹೆಜ್ಜೆ ಇಡಲು ಯಾವುದೇ ಕಾರಣವಿಲ್ಲ. ಇಂದು ಶಿವಠಾಣ ಗ್ರಾಮದಲ್ಲಿ ಮತ್ತೊಬ್ಬ ಯುವಕ ಸೇನೆಗೆ ಸೇರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಂಥ ಘಟನೆಗಳಿಗೆ ಕಡಿವಾಣ ಹಾಕಲು ನಿಯತಿ ಫೌಂಡೇಶನ್ ಮೂಲಕ “ಮಿಷನ್ ನೋ ಸೂಸೈಡ್ಸ್’ ಮೂಲಕ ಭಾವನಾತ್ಮಕ ಸ್ಥಿರತೆ ಮತ್ತು ಬೆಂಬಲದ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪ್ರಯತ್ನಿಸಲಾಗುತ್ತಿದೆ” ಎಂದರು.
“ನಾವೆಲ್ಲರೂ ವೈಯಕ್ತಿಕವಾಗಿ ಮತ್ತು ರಾಷ್ಟ್ರೀಯವಾಗಿ ಜೀವನದಲ್ಲಿ ಮಹತ್ತರವಾದ ಪರಿವರ್ತನೆಯ ಮೂಲಕ ಹೋಗುತ್ತಿದ್ದೇವೆ. ಏತನ್ಮಧ್ಯೆ, ನಾವೆಲ್ಲರೂ ಭಾವನಾತ್ಮಕವಾಗಿ ಬಲವಾಗಿ ಮತ್ತು ಸ್ಥಿರವಾಗಿ ಇರಬೇಕು. ಉದ್ಯೋಗಗಳು, ಸಂಬಂಧಗಳು, ಹಣ ಬದಲಾಯಿಸಬಹುದಾದವು ಆದರೆ ಜೀವನ ಬದಲಾಯಿಸಲಾಗದು,” ಎಂದು ಡಾ. ಸೋನಾಲಿ ಹೇಳಿದರು.
ಈ ಸಂದರ್ಭದಲ್ಲಿ ಮಹಾದೇವ ಅವರ ಕುಟುಂಬಸ್ಥರು, ಹಿತೈಷಿಗಳು ಇದ್ದರು.
*ಭಯಂಕರ ಭೂಕಂಪಕ್ಕೆ ತತ್ತರಿಸಿದ ಟರ್ಕಿ; 4000 ಜನರು ಸಾವು*
https://pragati.taskdun.com/turkey-earthquakesyria4000-people-death/
ಅಥಣಿ: ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ
https://pragati.taskdun.com/athani-the-accused-selling-ganja-was-arrested/
*BJPಯಲ್ಲಿ 8 ಜನ ಡಿಸಿಎಂ…ಆ ಎಂಟು ಜನ ಯಾರೆಂಬುದೂ ಗೊತ್ತಿದೆ; ಹೊಸ ಚರ್ಚೆ ಮುಂದಿಟ್ಟ ಮಾಜಿ ಸಿಎಂ*
https://pragati.taskdun.com/h-d-kumaraswamyclarificationbrahmana-cmprahlada-joshi8-dcm/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ