Latest

ಗಣೇಶ ವಿಸರ್ಜನೆ ವೇಳೆ ಎಡವಟ್ಟು ಮಾಡಿ ಪೇಚಿಗೆ ಸಿಲುಕಿದ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ; ಕುಮಟಾ: ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ವೇಳೆ ಗಣೇಶ ಮೂರ್ತಿಗೆ ಹಾಕಿದ್ದ ಚಿನ್ನದ ಉಂಗುರ, ಬೆಳ್ಳಿ ಚೈನು ಆಭರಣಗಳೊಂದಿಗೆ ಮೂರ್ತಿ ವಿಸರ್ಜನೆ ಮಾಡಿ ಗ್ರಾಮಸ್ಥರು ಪೇಚಿಗೆ ಸಿಲುಕಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದ ಮಳಲಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಗೋನರಹಳ್ಳಿಯಲ್ಲಿ ನಡೆದಿದೆ.

ವಿದ್ಯುಕ್ತವಾಗಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಬಳಿಕ ಗ್ರಾಮಸ್ಥರು ಸಮೀಪದ ಕೆರೆಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಿದ್ದಾರೆ. ಗಣಪತಿ ವಿಸರ್ಜನೆ ಮಾಡಿದ ಬಳಿಕ ಗ್ರಾಮಸ್ಥರಿಗೆ ಚಿನ್ನದ ಉಂಗುರ ಹಾಗೂ ಬೆಳ್ಳಿ ಆಭರಣಗಳು ಮೂರ್ತಿಯೊಂದಿಗೆ ವಿಸರ್ಜಿಸಿರುವುದು ನೆನಪಾಗಿದೆ.

ತಕ್ಷಣ ಕೆರೆಗೆ ಹೋಗಿ ನೀರಿನಲ್ಲಿ ಆಭರಣ ಹುಡುಕಲು ಯತ್ನಿಸಿದ್ದಾರೆ. ಆದರೂ ಆಭರಣಗಳು ಸಿಕ್ಕಿಲ್ಲ. ಅಂತಿಮವಾಗಿ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ್ ಎಂಬುವವರು ಸ್ಕೂಬಾ ಡೈ ಗೆ ಬಳಸುವ ಉಪಕರಣ ಬಳಸಿ ನೀರಿನಲ್ಲಿ ಮುಳುಗಿ ಗಣೇಶ ಮೂರ್ತಿಯೊಂದಿಗೆ ವಿಸರ್ಜಿಸಿದ ಆಭರಣವನ್ನು ಹುಡುಕಿ ವಾಪಸ್ ತಂದಿದ್ದಾರೆ.

ಬಿಜೆಪಿ ಆಫರ್ ಬಗ್ಗೆ ಯೂಟರ್ನ್ ಹೊಡೆದ ಶ್ರೀಮಂತ ಪಾಟೀಲ್

Home add -Advt

ಬಿಜೆಪಿಯಿಂದ ಹಣದ ಆಫರ್; ಎಸಿಬಿ ತನಿಖೆಗೆ ಆಗ್ರಹಿಸಿದ ಡಿ.ಕೆ.ಶಿವಕುಮಾರ್

Related Articles

Back to top button