ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಸಾವಿರ ಪೋಸ್ಟ್ ಕಾರ್ಡ್ ನಲ್ಲಿ ಜೈ ಶ್ರೀರಾಮ್ ಎಂದು ಬರೆದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಕಳಿಸಿದ್ದಾರೆ.
ಇಂದು ಕಾರ್ಡ್ ಗಳನ್ನು ಪ್ರದರ್ಶಿಸಿದ ಪದಾಧಿಕಾರಿಗಳು ನಂತರ್ ಪೋಸ್ಟ್ ಮಾಡಿದರು.
ಬಿಜೆಪಿ ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ, ರಾಜು ಚಿಕ್ಕನಗೌಡರ್, ದೀಪಕ ಜಮಖಂಡಿ, ಮಹಿಳಾಮೋರ್ಚಾ ಮಹಾನಗರ ಅಧ್ಯಕ್ಷೆ ಸವಿತಾ ಗುಡ್ಡಕಾಯು ಮೊದಲಾದವರಿದ್ದರು.