ಉತ್ತರ ಪ್ರದೇಶದಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್
ಪ್ರಗತಿ ವಾಹಿನಿ ಸುದ್ದಿ, ನವದೆಹಲಿ – ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ ಮತ್ತು ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆಗಳಿಗೆ ಏಳು ಹಂತದ ಮತದಾನ ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದೆ. ಈ ಪೈಕಿ ಅತ್ಯಂತ ಕುತೂಹಲಕ್ಕೆ ಕಾರಣವಾಗಿರುವ ಯುಪಿ ಮತ್ತು ಪಂಜಾಬ್ ಚುನಾವಣೆಯ ಫಲಿತಾಂಶಗಳ ಪೈಕಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಲಿದ್ದು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ವಿವಿಧ ಸಂಸ್ಥೆಗಳು ಕೈಗೊಂಡಿರುವ ಎಕ್ಸಿಟ್ ಪೋಲ್ ಫಲಿತಾಂಶ ಹೇಳುತ್ತಿದೆ.
ಅಲ್ಲದೇ ಗೋವಾ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸುವ ಸಾಧ್ಯತೆಯಿದ್ದು, ಮಣಿಪುರದಲ್ಲಿ ಬಿಜೆಪಿ ತನ್ನ ಸಹ ಪಕ್ಷಗಳೊಂದಿಗೆ ಪ್ರತಿಸ್ಪರ್ಧಿ ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್ ಫಲಿತಾಂಶ ತಿಳಿಸಿದೆ.
ಇಂಡಿಯಾ ಟುಡೆ ನೀಡಿರುವ ಫಲಿತಾಂಶದ ಪ್ರಕಾರ ಪಂಜಾಬ್‌ನಲ್ಲಿ ಆಪ್ ೭೦-೮೦ ಸ್ಥಾನ ಗೆಲ್ಲಲಿದ್ದು ೧೯-೩೧ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿಯ ಸ್ಥಾನಗಳಿಕೆ ೧-೪ಕ್ಕೆ ಸೀಮಿತವಾಗಲಿದೆ.
ಇನ್ನು ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತ ಸಾಧಿಸಲಿದ್ದರೂ ಕಳೆದ ಚುನಾವಣೆಗಿಂತ ಕಡಿಮೆ ಸ್ಥಾನ ಗೆಲ್ಲಲಿದೆ. ಇಲ್ಲಿ ಒಟ್ಟು ೪೦೩ ಸ್ಥಾನಗಳ ಪೈಕಿ ಬಿಜೆಪಿ ಈ ಬಾರಿ ೨೧೧-೨೧೫ ಸ್ಥಾನ ಗೆಲ್ಲಲಿದ್ದು ಎಸ್‌ಪಿ ಮತ್ತು ಅಲಯನ್ಸ್ ಪಕ್ಷಗಳು ೧೪೬-೧೬೦ ಸೀಟ್ ಗೆಲ್ಲಲಿದೆ. ಬಿಎಸ್‌ಪಿ ೧೪-೨೪ ಸ್ಥಾನಗಳಿಗೆ ಸೀಮಿತವಾಗಲಿದೆ. ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಲಿದ್ದು ಕೇವಲ ೪-೬ ಸೀಟ್ ಗೆಲ್ಲಲಿದೆ ಎಂದು ವರದಿ ತಿಳಿಸಿದೆ.
ಇನ್ನು ಟೈಮ್ಸ್ ನೌ ಎಕ್ಸಿಟ್ ಪೋಲ್ ವರದಿಯ ಪ್ರಕಾರ ಉತ್ತರಾಖಂಡದಲ್ಲಿ ಬಿಜೆಪಿ ೩೭, ಕಾಂಗ್ರೆಸ್ ೩೧ ಸ್ಥಾನ ಗೆಲ್ಲಲಿದೆ.
ಗೋವಾ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ೧೬ ಮತ್ತು ಬಿಜೆಪಿ ೧೪ ಸ್ಥಾನ ಗೆಲ್ಲಲಿದೆ. ಮಣಿಪುರದಲ್ಲಿ ಬಿಜೆಪಿ ೨೩-೨೮, ಕಾಂಗ್ರೆಸ್ ೧೦-೧೪ ಸೀಟ್ ಗೆಲ್ಲಲಿದೆ ಎಂದು ವರದಿ ನೀಡಿದೆ.
ಚುನಾವಣಾ ಫಲಿತಾಂಶ ಮಾರ್ಚ್ ೧೦ರಂದು ಹೊರಬೀಳಲಿದ್ದು ದೇಶಾದ್ಯಂತ ಕುತೂಹಲ ಮನೆ ಮಾಡಿದೆ.
ಸಚಿವರ ಮಗಳು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ