ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಕಾರವನ್ನು ಉರುಳಿಸಿ, ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವ ಪಡೆದುಕೊಂಡಿದ್ದ ಆಪರೇಷನ್ ಕಮಲ ಮತ್ತೆ ರಾಜ್ಯ ರಾಜಕಾರಣದಲ್ಲಿ ಮರುಕಳಿಸಲಿದೆ. ಶೀಘ್ರದಲ್ಲಿ ಕಾಂಗ್ರೆಸ್ ನಾಯಕರಿಗೆ ದೊಡ್ಡ ಅಚ್ಚರಿ ಕಾದಿದೆ ಎಂದು ಹೇಳುವ ಮೂಲಕ ಕಂದಾಯ ಸಚಿವ ಆರ್.ಅಶೋಕ್ ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊದಿಗೆ ಮಾತನಡಿದ ಸಚಿವ ಅಶೋಕ್, 10 ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಹಿಂದೆ ಬಂದಿರುವ ಶಾಸಕರ ಟೀಂ ಇನ್ನೊಂದು ಟೀಂ ಸೆಟ್ ಮಾಡಿದೆ. ಸಚಿವ ಮುನಿರತ್ನ ಎಲ್ಲರೂ ಸೇರಿ ಹಳೇ ಫ್ರೆಂಡ್ಸ್ ನ ಟೀಂ ಮಾಡಿದ್ದಾರೆ. ಈಗಾಗಲೇ ಮಾತುಕತೆಯೂ ನಡೆದಿದೆ. ಬಿಜೆಪಿಗೆ ಬರಲು ಸಜ್ಜಾಗಿದ್ದಾರೆ. ಶೀಘ್ರದಲ್ಲಿಯೇ 10 ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರ್ತಾರೆ ಎಂದರು.
ಕಾಂಗ್ರೆಸ್ ನಾಯಕರು ಈ ಟೀಂ ತಡೆಯಲು ಸಾಧ್ಯವಿಲ್ಲ. ಆಗ ಅವರದ್ದೇ ಸರ್ಕಾರ ಇದ್ದಾಗ ಅವರ ಮುಂದೆಯೇ 17 ಶಾಸಕರನ್ನು ಕರೆತಂದೆವು. ಆಗಲೇ ಏನೂ ಮಾಡಲು ಆಗಿಲ್ಲ ಈಗ ಅವರು ಹೇಗೆ ತಡೆಯುತ್ತಾರೆ? ಆಗ ಅವರದ್ದೇ ಸರ್ಕಾರ, ಆಡಳಿತ, ಪೊಲೀಸ್ ವ್ಯವಸ್ಥೆಯೂ ಅವರದ್ದೇ ಇತ್ತು. ಆದರೂ ಯಾವೊಬ್ಬ ಶಾಸಕರನ್ನು ತಡೆ ಹಿಡಿಯಲು ಕಾಂಗ್ರೆಸ್ ನಾಯಕರಿಗೆ ಆಗಲಿಲ್ಲ. ಈಗ ಅವರು ಏನು ಮಾಡುತ್ತಾರೆ? ಶೀಘ್ರದಲ್ಲಿಯೇ 10 ಜನರನ್ನು ಕರೆ ತರುವುದಾಗಿ ಮುನಿರತ್ನ ಹೇಳಿದ್ದಾರೆ. ಸಂಕ್ರಾಂತಿ ವೇಳೆಗೆ ಅಚ್ಚರಿ ಕಾದಿದೆ ಎಂದು ಹೇಳಿದರು.
ಈ ನಡುವೆ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೋಟಗಾರಿಕಾ ಸಚಿವ ಮುನಿರತ್ನ, ಶೀಘ್ರದಲ್ಲಿಯೇ ಕಾಂಗ್ರೆಸ್ ನ 10 ಶಾಸಕರು ಬಿಜೆಪಿಗೆ ಬರ್ತಾರೆ. ಸಮ್ಮಿಶ್ರ ಸರ್ಕಾರ ಇದ್ದಾಗ ನಾವು 17 ಶಾಸಕರು ಬಿಜೆಪಿಗೆ ಬಂದಿದ್ದೆವು. ಆಗಲೇ ತಡೆಯಲು ಸಾಧ್ಯವಾಗಲಿಲ್ಲ. ಈಗಲೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಒಟ್ಟು 22 ನಾಯಕರು ಬರಲು ರೆಡಿ ಇದ್ದಾರೆ ಅವರಲ್ಲಿ ನಾವು 10 ಜನರನ್ನು ಸಧ್ಯಕ್ಕೆ ಆಯ್ಕೆ ಮಾಡಿದ್ದೇವೆ. ನಮ್ಮ ಹಳೇ ಮಿತ್ರರ ಗುಂಪೇ ಬಿಜೆಪಿಗೆ ಬರ್ತಿದೆ. ಕಾದುನೋಡಿ…ಎಂದು ಹೇಳುವ ಮೂಲಕ ಆಪರೇಷನ್ ಕಮಲವನ್ನು ಖಚಿತಪಡಿಸಿದ್ದಾರೆ.
*ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ವಿ.ಎಸ್ ಪಾಟೀಲ್, ಶ್ರೀನಿವಾಸ್ ಭಟ್*
https://pragati.taskdun.com/v-s-patilshrinivas-bhatjoin-congress/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ