Latest

ರಾಜಕೀಯ ಪಕ್ಷಗಳಿಗೆ ಸಂದ ಕಾರ್ಪೋರೇಟ್ ದೇಣಿಗೆ 900 ಕೋಟಿಗೂ ಹೆಚ್ಚು: 720 ಕೋಟಿ ಸ್ವೀಕರಿಸಿದ ಬಿಜೆಪಿ ಮೊದಲ ಸ್ಥಾನ

ಪ್ರಗತಿ ವಾಹಿನಿ ಸುದ್ದಿ; ನವದೆಹಲಿ: 2019-20ನೇ ಸಾಲಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ಸ್ವೀಕರಿಸಿದ ಕಾರ್ಪೋರೇಟ್ ದೇಣಿಗೆಯನ್ನು ಎಡಿಆರ್ ಸಂಸ್ಥೆ ವರದಿ ಮಾಡಿದ್ದು ಎಲ್ಲ ಪಕ್ಷಗಳಿಂದ ಒಟ್ಟು 921.95 ಕೋಟಿ ದೇಣಿಗೆ ಸ್ವೀಕರಿಸಿವೆ. ಇದರಲ್ಲಿ ಬಿಜೆಪಿಗೆ ಸಿಂಹ ಪಾಲು ದೊರೆತಿದೆ. ಒಟ್ಟು 921.95 ಕೋಟಿಯಲ್ಲಿ ಬಿಜೆಪಿ ಪಕ್ಷವೊಂದಕ್ಕೇ 720.407 ಕೋಟಿ ರೂ. ದೊರೆತಿದೆ. ನಂತರದ ಸ್ಥಾನದಲ್ಲಿರುವ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‍ಗೆ 133.04 ಕೋಟಿ ರೂ. ದೇಣಿಗೆ ಲಭ್ಯವಾಗಿದ್ದರೆ ಎನ್‍ಸಿಪಿಗೆ 57.086 ಕೋಟಿ ಲಭ್ಯವಾಗಿದ್ದು ಮೂರನೇ ಸ್ಥಾನದಲ್ಲಿದೆ.

ಹೆಚ್ಚು ದೇಣಿಗೆ ಕೊಟ್ಟವರು

20 ಸಾವಿರ ರೂ. ಗಿಂತ ಹೆಚ್ಚು ದೇಣಿಗೆ ಕೊಟ್ಟವರ ಲೆಕ್ಕ ಪಡೆಯಲಾಗಿದೆ. ಒಟ್ಟು 2025 ವಿವಿಧ ಕಾರ್ಪೋರೇಟ್ ಕಂಪನಿಗಳು ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ. ಈ ಪೈಕಿ ಫ್ರುಡೆಂಟ್ ಇಲೆಕ್ಟ್ರೋಲ್ ಟ್ರಸ್ಟ್ ಬಿಜೆಪಿಗೆ 216. 75 ಕೋಟಿ ಹಾಗೂ ಕಾಂಗ್ರೆಸ್‍ಗೆ 31 ಕೋಟಿ ರೂ. ದೇಣಿಗೆ ನೀಡಿದೆ. 2019-20ನೇ ಸಾಲಿನಲ್ಲಿ ಈ ಸಂಸ್ಥೆ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸೇರಿ ಒಟ್ಟು 38 ಬಾರಿ ದೇಣಿಗೆ ಪಾವತಿ ಮಾಡಿದೆ. ಉಳಿದಂತೆ ಐಟಿಸಿ 55.025 ಕೋಟಿ, ಜನಕಲ್ಯಾಣ್ ಇಲೆಕ್ಟ್ರಾಲ್ ಟ್ರಸ್ಟ್ 45.95 ಕೋಟಿ ದೇಣಿಗೆ ನೀಡಿವೆ.
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ತುಟ್ಟಿಭತ್ಯೆ ಹೆಚ್ಚಳ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button