Politics

*10 ಕೆಜಿ ಅಕ್ಕಿಯೂ ಇಲ್ಲ, ದುಡ್ಡು ಇಲ್ಲ; ಇದು ಉಂಡು ಹೋದ ಕೊಂಡು ಹೋದ ಅಪರಾವತಾರ; ಸರ್ಕಾರದ ವಿರುದ್ಧ ಬಿಜೆಪಿ ಕಿಡಿ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಗೆ ಸೋಲು ಖಚಿತ ಎಂಬುದು ಗೊತ್ತಾಗುತ್ತಿದ್ದಂತೆ ಗ್ಯಾರಂಟಿ ಯೋಜನೆಗಳಿಗೆ ಸಂಚಕಾರ ಬಂದಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

Home add -Advt

ಸೋಲು ಖಚಿತ-ನಿಶ್ಚಿತ-ಖಂಡಿತವೆಂದ ತಕ್ಷಣ ಸರ್ಕಾರದ ಗ್ಯಾರಂಟಿಗಳಿಗೆ ಲಭಿಸಿದೆ ಸಂಚಕಾರ. ರಾಜ್ಯದ ಜನತೆಗೆ 10 ಕೆಜಿ ಅಕ್ಕಿ ಬೇಕೋ ಬೇಡ್ವೋ ಎಂದು ಕಿವಿಯ ಮೇಲೆ ಹೂವಿಟ್ಟಿದ್ದ ಸಿಎಂ ಸಿದ್ದರಾಮಯ್ಯ, ಈಗ ಜನತೆಯ ತಲೆ ಮೇಲೆ ಹೂವಿನ ಕುಂಡವನ್ನೇ ಇಟ್ಟಿದ್ದಾರೆ ಎಂದು ಕಿಡಿಕಾರಿದೆ.

10 ಕೆಜಿ ಅಕ್ಕಿಯೂ ಇಲ್ಲ, ಅಕ್ಕಿಯ ಬದಲು ದುಡ್ಡು ಇಲ್ಲ, ಇದೊಂದು ರೀತಿ ಉಂಡು ಹೋದ ಕೊಂಡು ಹೋದದ ಅಪರಾವತಾರ ಎಂದು ಆಕ್ರೋಶ ವ್ಯಲ್ತಪಡಿಸಿದೆ.

ಸಿಎಂ ಸಿದ್ದರಾಮಯ್ಯ ಅವರೇ, 3 ತಿಂಗಳಿನಿಂದ ಅಕ್ಕಿ ದುಡ್ಡು ಬಂದಿಲ್ಲ, ದುಡ್ಡು ಕೊಡ್ತಿರೋ ಇಲ್ವೋ ಅನ್ನೊದನ್ನ ಹೇಳ್ಬಿಡಿ ಎಂದು ಬಿಜೀಪಿ ಆಗ್ರಹಿಸಿದೆ.

Related Articles

Back to top button