ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ 300 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, ಮುಂಜಾಗೃತೆ ವಹಿಸುವುದು ಅಗತ್ಯವಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದ್ದು, ದೀರ್ಘಕಾಲ ಒಂದೇ ಮಾಸ್ಕ್ ಬಳಸುವುದು ಫಂಗಸ್ ಬರಲು ಕಾರಣವಾಗುತ್ತದೆ. ಹಾಗಾಗಿ ಒಂದೇ ಮಾಸ್ಕ್ ಬಳಕೆ ಸರಿಯಲ್ಲ. ಆಕ್ಸಿಜನ್ ಸೋರ್ಸ್ ನಿಂದ, ಅತಿಯಾದ ಸ್ಟಿರಾಯ್ಡ್ ಬಳಕೆಯಿಂದ, ಐಸಿಯು, ವೆಂಟಿಲೇಟರ್ ಬಳಸುವ ವಿಧಾನದಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ, ಡಯಾಬಿಟಿಸ್ ಇರುವವರಲ್ಲಿ ಈ ಬ್ಲ್ಯಾಕ್ ಫಂಗಸ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂದರು.
ಆಸ್ಪತ್ರೆಗಳಲ್ಲಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಕೋವಿಡ್ ವಾರ್ಡ್ ಗಳಿಗೆ ಬೇರೆಯವರಿಗೆ ಪ್ರವೇಶ ನೀಡಬಾರದು, ಪ್ರತಿ ಪಾಳಿಯಲ್ಲಿ ಆಸ್ಪತ್ರೆ ಫ್ಲೋರ್, ವಾರ್ಡ್ ಸ್ಯಾನಿಟೈಸ್ ಮಾಡಬೇಕು. ರೋಗಿಗಳನ್ನು ಶುಚಿಯಾಗಿಡಬೇಕು, ಸ್ಟಿರಾಯ್ಡ್ ಅಧಿಕ ಬಳಕೆ ಮಾಡಬಾರದು. ಕೊರೊನಾದಿಂದ ಗುಣಮುಖರಾದ ಮೇಲೆ ENT ಸ್ಪೆಷಲಿಸ್ಟ್ ಹಾಗೂ ಫಿಸಿಶಿಯನ್ ಮತ್ತೊಮ್ಮೆ ರೋಗಿಯನ್ನು ಪರೀಕ್ಷಿಸಬೇಕು ಎಂದು ಹೇಳಿದರು.
ತಾಯಿ ಕೊರೊನಾಗೆ ಸಾವನ್ನಪ್ಪಿದ ನಾಲ್ಕೇ ದಿನಕ್ಕೆ ವೈದ್ಯ ಮಗನೂ ಸೋಂಕಿಗೆ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ