ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಮಕ್ಕಳಲ್ಲಿಯೂ ಪತ್ತೆಯಾಗುತಿರುವುದು ಆತಂಕಕಾರಿ ಬೆಳವಣಿಗೆ. ಚಿತ್ರದುರ್ಗ ಹಾಗೂ ಬಳ್ಳಾರಿ ಮೂಲದ ಇಬ್ಬರು ಬಾಲಕರಿಗೆ ಬ್ಲ್ಯಾಕ್ ಫಂಗಸ್ ಮೆದುಳಿಗೆ ಅಟ್ಯಾಕ್ ಆಗಿರುವುದಾಗಿ ಮಿಂಟೋ ನಿರ್ದೇಶಕಿ ಡಾ.ಸುಜಾತಾ ತಿಳಿಸಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಡಾ.ಸುಜಾತಾ, ಚಿತ್ರದುರ್ಗದ 14 ವರ್ಷದ ಬಾಲಕ ಹಾಗೂ ಚಿತ್ರದುರ್ಗದ 1 ವರ್ಶದ ಬಾಲಕನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಚಿತ್ರದುರ್ಗದ ಬಾಲಕನಿಗೆ ಕೊರೊನಾ ಸೋಂಕು ಬಂದಿರುವುದು ಗೊತ್ತಾಗದೇ ಅದು ಬ್ಲ್ಯಾಕ್ ಫಂಗಸ್ ಆಗಿ ಮಾರ್ಪಟ್ಟಿದ್ದು, ಈಗಗಾಲೇ ದೃಷ್ಟಿ ಕಳೆದುಕೊಂಡಿದ್ದು, ಮೆದುಳಿಗೆ ಅಟ್ಯಾಕ್ ಆಗಿದೆ. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಇನ್ನು ಬಳ್ಳಾರಿ ಮೂಲದ 11ವರ್ಷದ ಬಾಲಕನಿಗೆ ಸಕ್ಕರೆ ಕಾಯಿಲೆಯಿತ್ತು. ಆತನಿಗೆ ಕೊರೊನಾ ಸೋಂಕು ಬಂದಿದ್ದು, ಚಿಕಿತ್ಸೆ ಪಡೆದು ಗುಣಮುಖನಾಗುತ್ತಿದ್ದ. ಆತನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು, ಮೆದುಳಿಗೆ ಅಟ್ಯಾಕ್ ಆಗಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟ; 210 ಜನರಲ್ಲಿ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ