Latest

ಬಾಯ್ ಫ್ರೆಂಡ್ ಹೆಸರಲ್ಲಿ ಗೆಳತಿಯಿಂದ ಆಪ್ತ ಸ್ನೇಹಿತೆಗೆ ಬ್ಲ್ಯಾಕ್ ಮೇಲ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಪ್ತ ಸ್ನೇಹಿತೆಗೆ ಬ್ಲ್ಯಾಕ್ ಮೇಲ್ ಮಾಡಿದ ಗೆಳತಿಯೊಬ್ಬಳು ಕೋಟ್ಯಂತರ ರೂಪಾಯಿ ವಂಚಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ತನ್ನ ಆಪ್ತ ಸ್ನೇಹಿತೆಯ ಹಳೇ ಲವ್ ಸ್ಟೋರಿ ತಿಳಿದುಕೊಂಡಿದ್ದ ಗೆಳತಿಯೊಬ್ಬಳು, ಸ್ನೇಹಿತೆಗೆ ಆಕೆಯ ಹಳೇ ಬಾಯ್ ಫ್ರೆಂಡ್ ಹೆಸರಲ್ಲಿ ಮೆಸೆಜ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಅಲ್ಲದೇ ನಿನ್ನ ಮಾಜಿ ಪ್ರಿಯತಮ ಹಾಗೂ ನಿನ್ನ ಖಾಸಗಿ ವಿಡಿಯೋ ಹಾಗೂ ಫೋಟೋಗಳು ನನ್ನ ಬಳಿಯಿದ್ದು, ಹೇಳಿದಷ್ಟು ಹಣ ನೀಡದಿದ್ದರೆ ಅವುಗಳನ್ನು ನಿನ್ನ ಪತಿಗೆ ಕೊಡುತ್ತೇನೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ವಿಡಿಯೋ ಹರಿಬಿಡುವುದಾಗಿ ಬೆದರಿಕೆಯೊಡ್ಡಿದ್ದಾಳೆ.

ಭಯಗೊಂಡ ಸಂತ್ರಸ್ತೆ ಆರೋಪಿ ಕೇಳಿದಷ್ಟು ಹಣ ವರ್ಗಾಯಿಸಿದ್ದಾರೆ. ಹೀಗೆ ಬ್ಲ್ಯಾಕ್ ಮಾಡಿ ಆರೋಪಿ ಮಹಿಳೆ ತನ್ನ ಗೆಳತಿಯಿಂದ 1.25 ಕೋಟಿ ಹಣ ವಂಚಿಸಿದ್ದಾಳೆ. ಬಳಿಕ ಸಂತ್ರಸ್ತ ಮಹಿಳೆ ವೈಟ್ ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಾಗಿ ಬಲೆ ಬೀಸಿರುವ ಪೊಲೀಸರು ಅನು ಅಲಿಯಾಸ್ ಅಪರ್ಣಾ ಎಂಬಾಕೆಯನ್ನು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button