Latest

ಕಿಲೋಮೀಟರ್ ದೂರದವರೆಗೆ ಮೃತದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ

ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ – ಹುಣಸಗೋಡು ಬಳಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಸಾವಿಗೀಡಾದವರ ನಿಖರ ಸಂಖ್ಯೆ ಇನ್ನೂ ಖಚಿತವಾಗಿಲ್ಲ. 6 ಮೃತದೇಹಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಕಿಲೋಮೀಟರ್ ದೂರವರೆಗೂ ಮೃತದೇಹಗಳು ಛಿದ್ರವಾಗಿ ಬಿದ್ದಿವೆ.

ಪೊಲೀಸರು ಸಂಪೂರ್ಣ ಪ್ರದೇಶವನ್ನು ಸುತ್ತುವರಿದಿದ್ದು, ಪರಿಶೀಲನೆ ನಡೆಸಿದ್ದಾರೆ. ಕ್ರಷರ್ ಯಾರದ್ದು, ಸ್ಫೋಟಕ್ಕೆ ಕಾರಣವೇನು ಎನ್ನುವ ಮಾಹಿತಿ ಇನ್ನೂ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಆ ಪ್ರದೇಶದಲ್ಲಿ ಸಂಪೂರ್ಣ ಕತ್ತಲು ಆವರಿಸಿದೆ. ಪರಿಶೀಲನೆಗೆ ಕಷ್ಟವಾಗುತ್ತಿದೆ. ಸುಮಾರು 150 ಎಕರೆಯಷ್ಟು ಪ್ರದೇಶದಲ್ಲಿ ಕ್ರಷರ್ ಕಾರ್ಯಾಚರಣೆ ನಡೆಸುತ್ತಿತ್ತು. ಲಾರಿಯಲ್ಲೇ ಡೈನಮೈಟ್ ಒಯ್ದಿರುವ ಶಂಕೆ ಇದೆ.

Home add -Advt

ಸ್ಫೋಟದ ಶಬ್ಧ ಸುಮಾರು ನೂರು ಕಿಲೋ ಮೀಟರ್ ವರೆಗೆ ಕೇಳಿಸಿದೆ.

ಭೂಕಂಪನವಲ್ಲ; ಶಿವಮೊಗ್ಗ ಬಳಿ ಡೈನಮೈಟ್ ಸ್ಫೋಟ; 6 ಜನರ ಸಾವು

 

Related Articles

Back to top button