

ಪ್ರಗತಿವಾಹಿನಿ ಸುದ್ದಿ, ರಾಣೆಬೆನ್ನೂರು: ಅಂಧ ಮಕ್ಕಳಿಗಾಗಿ ಅಂಧರೇ ನಡೆಸುವ ಇಲ್ಲಿಯ ಅಂಧರ ಜೀವ ಬೆಳಕು ಸಂಸ್ಥೆಗೆ ನಗರ ಯೋಜನಾ ಪ್ರಾಧಿಕಾರ 8 ಗುಂಟೆ ಜಾಗ ಮಂಜೂರು ಮಾಡಿದ್ದು, ಸರಕಾರದ ನಿಯಮಾವಳಿ ಪ್ರಕಾರ ಮಾರುಕಟ್ಟೆ ದರದ ಶೇ.50ರಷ್ಟನ್ನು ಸಂಸ್ಥೆ ಭರಿಸಬೇಕಿದೆ.

ಸುಮಾರು 14 ಲಕ್ಷ ರೂ.ಗಳನ್ನು ಸಂಸ್ಥೆಯು ನಗರ ಯೋಜನಾ ಪ್ರಾಧಿಕಾರಕ್ಕೆ ತುಂಬಿದರೆ ಜಾಗ ನೊಂದಣಿ ಪ್ರಕ್ರಿಯೆ ನಡೆಸಲು ಸಾಧ್ಯವಾಗಲಿದೆ. ಆದರೆ ಸಾರ್ವಜನಿಕರ ದೇಣಿಗೆಯಿಂದಲೇ ನಡೆಯುತ್ತಿರುವ ಸಂಸ್ಥೆಗೆ ಅಷ್ಟು ಹಣ ಭರಿಸಲು ಸಾಧ್ಯವಿಲ್ಲದ್ದರಿಂದ ಸಾರ್ವಜನಿಕರು, ಸಂಸ್ಥೆಗಳು ಆರ್ಥಿಕ ಸಹಾಯ ನೀಡಬೇಕೆಂದು ಅಂಧರ ಜೀವ ಬೆಳಕು ಸಂಸ್ಥೆಯ ಮುಖ್ಯಸ್ಥ, ಸ್ವತಃ ಅಂಧರಾಗಿರುವ ನಾಗನಗೌಡ ಬೆಳ್ಳೋಳಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಅವರನ್ನು 9535951112 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ