Latest

ಅಂಧತ್ವ ಮೆಟ್ಟಿನಿಂತು ಅಂಧರ ಬಾಳಿಗೆ ಬೆಳಕಾದ ಸಾಧಕ; ನಾಗನಗೌಡ ಬೆಳ್ಳುಳ್ಳಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ; ರಾಣೆಬೆನ್ನೂರು: ಮತ್ತೊಬ್ಬರ ಜೀವನದಲ್ಲಿ ಬೆಳಕನ್ನು ಮೂಡಿಸಲು ಪ್ರಯತ್ನಮಾಡಿದ ಅಂಧರ ಜೀವ ಬೆಳಕು ಸಂಸ್ಥೆಯ ಸಂಸ್ಥಾಪಕ ನಾಗನಗೌಡ ಬೆಳ್ಳುಳ್ಳಿ  ಪ್ರಧಾನಿ ಮೋದಿಯವರ 71ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ.

ಸ್ವತ: ರಕ್ತದಾನ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾದ ನಾಗನಗೌಡ ಬೆಳ್ಳುಳ್ಳಿ ಅವರ ಪ್ರಯತ್ನವನ್ನು ನೋಡಿ ಬಿಜೆಪಿ ಸ್ಥಳೀಯ ಕಾರ್ಯಕರ್ತರು  ನಾಗನಗೌಡ ಬೆಳ್ಳುಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಿದರು.

Home add -Advt

ಭಾರತೀಯ ಜನತಾ ಪಾರ್ಟಿಯ ರಾಣೆಬೆನ್ನೂರು ನಗರ ಘಟಕದ ಅಧ್ಯಕ್ಷ ದೀಪಣ್ಣ ಹರಪ್ನಳ್ಳಿ ಹಾಗೂ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ್ ಕೆಲ್ಗರ್ ಹಾಗೂ ಪ್ರಧಾನ ಕಾರ್ಯದರ್ಶಿ ಜಗದೀಶ್ ಬಸವರಾಜ್ ಹಾಗೂ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶಿವಯೋಗಿ, ಗ್ರಾಮೀಣ ಘಟಕದ ಅಧ್ಯಕ್ಷ ವಿನಯ್ ಕುಮಾರ್ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಶಂಭು ಪಾಟೀಲ್ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button