ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಿನ್ನೆಲೆ; ಕೆ ಎಲ್ ಇಯಲ್ಲಿ 310ಕ್ಕೂ ಹೆಚ್ಚು ಜನರಿಂದ ರಕ್ತದಾನ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ವಿವಿಧೆಡೆ ರಕ್ತದಾನ ಶಿಬಿರ ಏರ್ಪಡಿಸಿತ್ತು.
ರಕ್ತ ಭಂಡಾರವು ವಿವಿಧ ಪ್ರದೇಶಗಳಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸುಮಾರು 310ಕ್ಕೂ ಅಧಿಕ ಜನರು ತಮ್ಮ ರಕ್ತದಾನವನ್ನು ಮಾಡಿ, ಅಗತ್ಯವಿರುವ ರೋಗಿಗಳಿಗೆ ನೆರವಾದರು.
20ಕ್ಕೂ ಅಧಿಕ ಆರ್‌ಎಲ್ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೈಲಹೊಂಗಲದ ಕೆಆರ್ ಸಿಎಸ್ ಮಹಾವಿದ್ಯಾಲಯದ 100 ವಿದ್ಯಾರ್ಥಿ ಹಾಗೂ ನಾಗರೀಕರು ಹಾಗೂ ಟೆನಿಸ್ ಹಾಲ್ ನಲ್ಲಿ 76 ಜನರು, 100 ಜೆಎನ್‌ಎಂಸಿ ವಿದ್ಯಾಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.
ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಬೆಳಗಾವಿ ಔಷಧ ನಿಯಂತ್ರಣಾ ಉಪನಿರ್ದೇಶಕರಾದ ರಘುರಾಮ ಎನ್ ವಿ ಮಾತನಾಡಿ, ರಕ್ತದಾನ ಅಂಗವಾಗಿ ಪಡೆದುಕೊಳ್ಳುವ ರಕ್ತದ ಪ್ರಮಾಣ ಹಾಗೂ ವಿಧಾನಗಳು ಬದಲಾವಣೆಗಳಾಗಬಹುದು, ಆದರೆ ಒಬ್ಬ ವ್ಯಕ್ತಿ 350 ಮಿ.ಲೀ. ನಷ್ಟು ಸಂಪೂರ್ಣ ರಕ್ತವನ್ನು ನೀಡಬಹುದು. ರಕ್ತ ಸಂಗ್ರಹಣೆಯನ್ನು ಸಾಮಾನ್ಯ ರೂಢಿಯಂತೆ ಅಥವಾ ಸ್ವಯಂಚಾಲಿತ ರಕ್ತಸಂಗ್ರಹಣ ಯಂತ್ರದಿಂದಲೂ ರಕ್ತದ ನಿಗದಿತ ಭಾಗಗಳನ್ನು ಮಾತ್ರ ಸಂಗ್ರಹಿಸಬಹುದು.
ರಕ್ತವರ್ಗಾವಣೆ ನಡೆಸಲು ಬಳಸಲಾಗುವ ರಕ್ತದ ಬಹುತೇಕ ಘಟಕಗಳ ಶೇಖರಣಾ ಅವಧಿ ಅತಿ ಕಡಿಮೆ ಅವುಗಳ ನಿರಂತರ ಪೂರೈಕೆಯನ್ನು ಮಾಡುವುದು ಕೂಡ ಕೆಲವೊಮ್ಮೆ ಸಮಸ್ಯೆಯಾಗುತ್ತದೆ ಎಂದು ಅವರಿಂದಿಲ್ಲಿ ಹೇಳಿದರು.
ರಕ್ತದಾನಿಗಳು ತಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ರಕ್ತವರ್ಗಾವಣೆಯ ಅಗತ್ಯ ಇದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ. ಬಹುತೇಕರು ದಾನವಾಗಿ ನೀಡುತ್ತಾರೆ. ಆದ್ದರಿಂದ ರಕ್ತದಾನವನ್ನು ಒಂದು ಸಾಮಾಜಿಕ ಸೇವೆ ಎಂದು ತಿಳಿದು ರಕ್ತ ನೀಡಲು ಮುಂದಾಗಬೇಕು. ಒರ್ವ ವ್ಯಕ್ತಿ ನೀಡುವ ರಕ್ತವು ನಾಲ್ವರಿಗೆ ಸದುಪಯೋಗವಾಗುತ್ತದೆ. ಅದರಲ್ಲಿಯೂ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳವಾಗಿರುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ರಕ್ತ ಭಂಡಾರದ ಮುಖ್ಯಸ್ಥರಾದ ಎಸ ವಿ ವೀರಗಿ, ಡಾ. ಅವಿನಾಶ ಕವಿ, ಸಂಸ್ಥೆಯ ಜಂಟಿ ಕರ‍್ಯದರ್ಶಿ ಡಾ. ಸುನೀಲ ಜಲಾಲಪೂರೆ, ಡಾ. ಸೌಮ್ಯ ಮಾಸ್ತೆ, ಡಾ. ಎಂ ಎಸ್ ಗಣಾಚಾರಿ, ಹರ್ಷವರ್ಧನ ಇಂಚಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
95 ವಸಂತ ಕಂಡ ಸಿಆರ್‌ಕೆ ಕೆಯುಡಬ್ಲ್ಯುಜೆ ಸನ್ಮಾನ
https://pragati.taskdun.com/latest/crkkuwjsanmana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ