
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಮಹಾಮಾರಿಯಿಂದ ರಕ್ತದ ಕೊರತೆಯಿಂದ ಬಳಲುವ ರೋಗಿಗಳ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿರುವ ಕಾರಣ ಎಲ್ಲೆಡೆ ರಕ್ತದ ಕೊರತೆ ಉಂಟಾಗುತ್ತಿದೆ. ಅದನ್ನು ಮನಗಂಡು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವಿಶ್ವಹಿಂದೂ ಪರಿಷತ್ ಉತ್ತರ ಪ್ರಾಂತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಹೇಳಿದರು.
ವಿಶ್ವ ಹಿಂದೂ ಪರಿಷತ್ -ಬಜರಂಗದಳ ವತಿಯಿಂದ ಭಾನುವಾರ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ರಾಮಜನ್ಮಭೂಮಿ ಆಂದೋಲನದಲ್ಲಿ ಕರಸೇವಕರಾಗಿ ಬಲದಾನಗೈದ, ಕೊಠಾರಿ ಬಂಧುಗಳ ಸವಿ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 2ರಂದು ಮಾಡುವ “ಬಲಿದಾನ ದಿವಸ ” ರಕ್ತದಾನ ಶಿಬಿರವನ್ನು ಈಗಿನ ಕೊರೋನಾ ತುರ್ತು ಸಂದರ್ಭದಲ್ಲಿ ಮಾಡಲು ನಿಶ್ಚಯಿಸಲಾಗಿದೆ ಎಂದು ಅವರು ತಿಳಿಸಿದರು.
ರಕ್ತದಾನ ಎಂದರೆ ಅದು ಜೀವದಾನ, ತುರ್ತುಪರಿಸ್ಥಿತಿಯಲ್ಲಿ ಬದಕುಳಿಯಲು ರಕ್ತವೇ ಆಧಾರ. ಆದ್ದರಿಂದ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ರಕ್ತದಾನ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ವಿನಂತಿಸಿದರು.
ಶಿಬಿರದ ಉದ್ಘಾಟನೆಯನ್ನು ಶ್ರೀ ಚನ್ನಬಸವ ದೇವರು ( ರುದ್ರಸ್ವಾಮಿ ಮಠ ಬೀಳಕಿ ಅವರೊಳ್ಳಿ ) ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುನಿಲ ಅಪ್ಟೇಕರ (ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು) ಮತ್ತು ಕೃಷ್ಣ ಸಿದ್ದಪ್ಪ ಕುರುಬರ (ಸಮುದಾಯ ಸದಸ್ಯ ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು) ಆಗಮಿಸಿದ್ದರು.
ರವಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ಶಾಸ್ತ್ರಿನಗರದ ಗುಜರಾತ್ ಭವನದಲ್ಲಿ ರಕ್ತದಾನ ಶಿಬಿರ ನಡೆಯಿತು. ನೂರಾರು ಜನರು ಆಗಮಿಸಿ ರಕ್ತದಾನ ಮಾಡಿದರು.
ಕೊರೋನಾ ಸೋಂಕಿತರಿಗೆ ರಕ್ತದ ಕೊರತೆ: ಭಾನುವಾರ ರಕ್ತದಾನ ಶಿಬಿರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ