Kannada NewsKarnataka NewsLatest

*BMTC ಬಸ್ ಗೆ ಮೂರು ವರ್ಷದ ಬಾಲಕ ಬಲಿ; ಅಪಘಾತದ ರಭಸಕ್ಕೆ ಮಗುವಿನ ತಲೆಯೇ ಛಿದ್ರ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದೆ. ಬಿಎಂಟಿಸಿ ಬಸ್ ಹರಿದು 3 ವರ್ಷದ ಮಗು ಸವನ್ನಪ್ಪಿರುವ ಘಟನೆ ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್ ಬಳಿ ನಡೆದಿದೆ.

ಮೂರು ವರ್ಷದ ಅಯಾನ್ ಮೃತ ಮಗು. ದೊಡ್ಡಮ್ಮನ ಜೊತೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ. ಈ ವೇಳೆ ಬಸ್ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಅಯಾನ್ ಮೇಲೆಯೇ ಬಸ್ ಹರಿದು ಹೋಗಿದೆ.

ಬಸ್ ಚಕ್ರದಡಿ ಸುಲಿಕಿ ಅಯಾನ್ ತಲೆ ಛಿದ್ರ ಛಿದ್ರವಾಗಿದೆ. ಹುಳಿಮಾವು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Related Articles

Back to top button