*ನಿಂಗಾಪುರ ಗ್ರಾಮದ ಕೆರೆಯಲ್ಲಿ ಬೋಟ್ ವ್ಯವಸ್ಥೆ: ಡಿಸಿ ರೋಷನ್ ಭರವಸೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಶಾಲಾ ಮಕ್ಕಳಿಂದ ಟ್ಯೂಬ್ ಕಟ್ಟಿಕೊಂಡು ಶಾಲೆಗೆ ತೆರಳುವ ವಿಷಯ ನನ್ನ ಗಮನಕ್ಕೆ ಬಂದಿದೆ. ಹಾಗಾ ನಾಳೆಯಿಂದಲೇ ಅಲ್ಲಿ ಒಂದು ಬೋಟ್ ವ್ಯವಸ್ಥೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಭರವಸೆ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಕಿತ್ತೂರ ತಾಲೂಕಿನ ನಿಂಗಾಪುರ್ ಗ್ರಾಮದ ಮಕ್ಕಳ ಸಮಸ್ಯೆ ನನಗೆ ಅರ್ಥ ಆಗಿದೆ. ಮಕ್ಕಳ ಶಿಕ್ಷನಗೋಷ್ಕರ ನಾಳೆಯಿಂದ ಒಂದು ಬೋಟ್ ವ್ಯೆವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗುತ್ತೆ. ಈಗಾಗಲೆ ಕಿತ್ತೂರು ಶಾಸಕ ಮತ್ತು ಕಿತ್ತೂರು ತಹಶಿಲ್ದಾರರ ಜೊತೆ ಮಾತನಾಡಿದ್ದೇನೆ. ನಾಳೆನೆ ನಿಂಗಾಪುರ್ ಗ್ರಾಮದ ಕೆರೆಯಲ್ಲಿ ಬೋಟ್ ವ್ಯವಸ್ಥೆ ಮಾಡುತ್ತೇವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳುತ್ತವೆ ಎಂದು ಭರವಸೆ ನೀಡಿದರು.
ಕಾಂಡಂಚಿನ ಗ್ರಾಮಸ್ಥರ ಸ್ಥಳಾಂತರಿಸುವ ಬಗ್ಗೆ ನಿರ್ಧಾರ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಈಗಾಗಲೇ ಅರಣ್ಯ ಸಚಿವರನೊಂದಿಗೆ ಮಾತನಾಡಿದರೆ, ಖಾನಾಪೂರ ತಾಲೂಕಿನ ಕಾಡಂಚಿನ ನೂರಾರು ವರ್ಷಗಳಿಂದ ಅಲ್ಲಿ ಜನರು ವಾಸವಿದ್ದಾರೆ, ಅರಣ್ಯ ಇಲಾಖೆ ಕಾಯಿದೆ ಪ್ರಕಾರ ಗ್ರಾಮಸ್ಥರು ಒಪ್ಪಿದ್ದರೆ, ಕುಟುಂಬಕ್ಕೆ 15 ಲಕ್ಷ ರೂಪಾಯಿ ನೀಡುತ್ತೇವೆ, ಈ ಬಗ್ಗೆ ಖಾನಾಪೂರಕ್ಕೆ ನೆರೆ ಹಾವಳಿ ವೀಕ್ಷಣೆಗೆ ತೆರಳಿದಾಗ ಸ್ಥಳೀಯ ಶಾಸಕರೊಂದಿಗೆ ಚರ್ಚೆಸಲಾಗಿದೆ. ಮಳೆ ಕಡಿಮೆಯಾದ ಮೇಲೆ ಖಾನಾಪೂರಕ್ಕೆ ತೆರಳಿ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ