
ಪ್ರಗತಿವಾಹಿನಿ ಸುದ್ದಿ : ದಂಪತಿಗಳು ಹಾಗೂ ಮೂರು ಮಕ್ಕಳ ಶವಗಳು ಬೆಡ್ ಬಾಕ್ಸ್ ನಲ್ಲಿ ಪತ್ತೆಯಾಗಿರುವ ಭೀಕರ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಈ ಘಟನೆಯು ಗುರುವಾರ ರಾತ್ರಿ ನಡೆದಿದ್ದು ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಮೊಯೀನ್ ಹಾಗೂ ಅವರ ಪತ್ನಿ ಅಸ್ಮಾಮತ್ತು ಮಕ್ಕಳಾದ ಆಫ್ಘಾ(8), ಅಝೀಜಾ (4) ಹಾಗೂ ಅಬೀಬಾ(1) ಮೃತ ದುರ್ದೈವಿಗಳು.
ಗಾರೆಕೆಲಸದ ವೃತ್ತಿಯಲ್ಲಿದ್ದ ಮೊಯೀನ್ ತನ್ನ ಕುಟುಂಬದೊಡನೆ ಸೊಹೇಲ್ ಗಾರ್ಡನ್ ನಲ್ಲಿ ವಾಸಿಸುತ್ತಿದ್ದರು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯವನ್ನು ನಡೆಸಿರಬಹುದೆಂದು ಶಂಕಿಸಲಾಗಿದೆ. ಲಿಸಾಡಿ ಗೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಎಫ್‌ಎಸ್ಎಲ್ ಟೀಂ ಸಹ ಜೊತೆಯಲ್ಲಿ ಸಾಕ್ಷ್ಯಗಳನ್ನು ಕಲೆ ಹಾಕುತಿದ್ದು, ಶೀಘ್ರದಲ್ಲಿಯೇ ಕೊಲೆಗಾರರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ