
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಹೊರವಲಯದ ಹಿರಣ್ಯಕೇಶಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸಂಕೇಶ್ವರ ಪಟ್ಟಣದ ನದಿ ಗಲ್ಲಿ ಹತ್ತಿರದಲ್ಲಿ ಇರುವ ಬ್ರಿಜ್ ಕಮ್ ಬಾಂದಾರದ ನೀರಿನಲ್ಲಿ ಈ ಶವವು ಪತ್ತೆಯಾಗಿದೆ. ಪುರಸಭೆ ಕಾರ್ಮಿಕರು ನದಿಗೆ ಅಡ್ಡಲಾಗಿರುವ ಬ್ರಿಜ್ ಕಮ್ ಬಾಂದಾರದಲ್ಲಿನ ಕಸ ತೆಗೆಯುವ ಸಂದರ್ಭದಲ್ಲಿ ಶವ ಪತ್ತೆ ಯಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವದು ನಿಗೂಢವಾಗಿದೆ.
ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವದ ಮೇಲೆ ಗಾಯದ ಗುರುತುಗಳಿವೆ ಎಂದು ತಿಳಿದು ಬಂದಿದೆ. ಈ ಪ್ರಕರಣ ಸಂಬಂಧ ಪೊಲೀಸರು ತನೆಖೆ ಆರಂಭಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ