Cancer Hospital 2
Beereshwara 33
LaxmiTai 5

*ಜರ್ಮನ್ ಮ್ಯೂನಿಕ್ ಏರ್ ಪೋರ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ; ಬೆಂಗಳೂರಿಗೆ ಆಗಮಿಸುವುದು ಕನ್ಫರ್ಮ್*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ; ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಿರುವುದು ಕನ್ಫರ್ಮ್ ಆಗಿದೆ. ಜರ್ಮನಿಯ ಏರ್ ಪೋರ್ಟ್ ನಲ್ಲಿ ಪ್ರಜ್ವಲ್ ಪ್ರತ್ಯಕ್ಷರಾಗಿದ್ದು, ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜರ್ಮನಿಯ ಮ್ಯೂನಿಕ್ ಏರ್ ಪೋರ್ಟ್ ಗೆ ಆಗಮಿಸಿರುವ ಪ್ರಜ್ವಲ್ ರೇವಣ್ಣ, 2 ಲಗೇಜ್ ಬ್ಯಾಗ್ ಚೆಕ್ ಇನ್ ಮಾಡಿದ್ದು, ಕೆಲವೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಪ್ರಯಾಣಿಸಲಿರುವ ಲುಫ್ತಾಂಜಾ ಏರ್ ಲೈನ್ಸ್ ಟೇಕಾಫ್ ಆಗಲಿದೆ.

Emergency Service

ಮಧ್ಯಾಹ್ನ 3:30ಕ್ಕೆ ಟೇಕಾಫ್ ಆಗಲಿರುವ ವಿಮಾನ ಇಂದು ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಪ್ರಜ್ವಲ್ ರೇವಣ್ಣ ಏರ್ ಪೋರ್ಟ್ ಗೆ ಬರುತ್ತಿದ್ದಂತೆಯೇ ಅಲ್ಲಿಯೇ ಅವರನ್ನು ಬಂಧಿಸುವ ನಿಟ್ಟಿನಲ್ಲಿ ಎಸ್ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.


Bottom Add3
Bottom Ad 2