Latest

ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ನಾಲ್ವರಿಗೆ ಗಾಯ

ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದ ಬಳಿ ಇರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನೂತನ ಬಾಯ್ಲರ್‌ ಪರೀಕ್ಷಾರ್ಥ ವೇಳೆ ಸ್ಫೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.

ಇತ್ತೀಚೆಗಷ್ಟೇ ಕಾರ್ಖಾನೆಯಲ್ಲಿ ನೂತನವಾಗಿ ಪುಣೆಯಿಂದ 51ಕೋಟಿ ರೂ. ವೆಚ್ಚದ 220ಟನ್ ಸಾಮರ್ಥ್ಯದ ಬಾಯ್ಲರ್‌ ತಂದು ಅಳವಡಿಸಲಾಗಿತ್ತು. ಅದನ್ನು ಶನಿವಾರ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸುತ್ತಿದ್ದ ವೇಳೆ ಬಾಯ್ಲರ್‌ ಏಕಾಏಕಿ ಸ್ಫೋಟಗೊಂಡಿತು. ಇದರಿಂದ ಸ್ಥಳದಲ್ಲಿದ್ದ ನಾಲ್ವರು ಕಾರ್ಮಿಕರು ಗಾಯಗೊಂಡು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಜಯಪುರ, ಮುಧೋಳ, ಬಾಗಲಕೋಟೆ, ಬೀಳಗಿಯಿಂದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸತತ ಎರಡು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದರು. ಈ ಕುರಿತು ಬಬಲೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಖಾನೆಯವರು ಈ ಮೊದಲು ದೆಹಲಿಯ ಕಂಪನಿಯೊಂದರಿಂದ ನೂತನ ಬಾಯ್ಲರ್ ಖರೀದಿಸಲು ಯೋಜಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಅದನ್ನು ರದ್ದುಪಡಿಸಿ ಪುಣೆಯ ಕಂಪನಿಯಿಂದ ತರಿಸಿಕೊಂಡಿದ್ದರು. ಆದರೆ ಅದರ ಗುಣಮಟ್ಟ ಕಳಪೆಯಾಗಿದ್ದ ಆರೋಪ ಕೇಳಿಬಂದಿದೆ. ಇದರೊಂದಿಗೆ ದೆಹಲಿ ಕಂಪನಿಯ ಖರೀದಿ ಆರ್ಡರ್ ಕೊನೆಯ ಹಂತದಲ್ಲಿ ರದ್ದುಪಡಿಸಿದ ಕಾರಣ 5 ಕೋಟಿ ರೂ. ದಂಡ ಭರಿಸಿದ ಮಾಹಿತಿಯಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

https://pragati.taskdun.com/praveen-nettaru-murder-case-another-accused-was-arrested-in-a-cinematic-fashion/
https://pragati.taskdun.com/education-department-has-given-good-news-to-puc-second-year-students/
https://pragati.taskdun.com/cold-fever-cases-are-increasing-across-the-country/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button