Kannada NewsKarnataka NewsNational
*ಮದ್ಯ ಸೇವಿಸಿ ಕಾರು ಚಲಾಯಿಸಿ ಮೂವರಿಗೆ ಡಿಕ್ಕಿ ಹೊಡೆದ ಬಾಲಿವುಡ್ ನಟಿ ರವೀನಾ ಟಂಡನ್*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಮತ್ತು ಅವರ ಕಾರ್ ಚಾಲಕ ಮದ್ಯ ಸೇವಿಸಿ ಕಾರ್ ಚಲಾಯಿಸಿ ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧ ಮಹಿಳೆ ಸೇರಿದಂತೆ ಮೂವರಿಗೆ ಡಿಕ್ಕಿ ಹೊಡೆದಿದ್ದಾರೆ.
ಈ ಘಟನೆ ಶನಿವಾರ ರಾತ್ರಿ ಮುಂಬೈ ನ ರಿಜ್ವಿ ಕಾಲೇಜಿನ ಬಳಿ ನಡೆದಿದೆ. ವೃದ್ಧ ಮಹಿಳೆಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಅಪಘಾತ ಸಂಭವಿಸಿದ ಕೂಡಲೆ ಉದ್ರಿಕ್ತ ಜನರ ಗುಂಪು ರವೀನಾ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ಜನರು ರವೀನಾ ಮೇಲೆ ಹಲ್ಲೆ ನಡೆಸಿದಾಗ ಪ್ಲೀಸ್ ನನಗೆ ಹೊಡೆಯಬೇಡಿ ಎಂದು ಕೈಮುಗಿದು ಕೇಳಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರವೀನಾ ಟಂಡನ್ ವಿರುದ್ದ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ