Latest

ಮಹೇಶ ಭಟ್ ಮೂಲ ಹೆಸರು ‘ಅಸ್ಲಂ’ ಅಂತೆ ! ಸುಂದರ ಹೆಸರು ಮರೆ ಮಾಚುವುದೇಕೆ ಎಂದ ಕಂಗನಾ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಾಲಿವುಡ್ ಚಿತ್ರ ನಿರ್ಮಾಪಕ ಮಹೇಶ ಭಟ್ ಅವರ ನಿಜವಾದ ಹೆಸರು ‘ಅಸ್ಲಂ’ ಅಂತೆ.

ನಟಿ ಕಂಗನಾ ರಾಣಾವತ್ ಹಂಚಿಕೊಂಡ ಮಹೇಶ ಭಟ್ ಅವರ ಹಳೆಯ ವಿಡಿಯೊವೊಂದು ಈಗ ಭಾರೀ ಗುಲ್ಲೆಬ್ಬಿಸಿದೆ. ಕಂಗನಾ ಅವರು ಭಾನುವಾರ ಮಹೇಶ ಭಟ್ ಅವರಿಗೆ ಸಂಬಂಧಿಸಿದ ಸರಣಿ ವಿಡಿಯೊ ಕ್ಲಿಪ್ ಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಅದರಲ್ಲಿ “ಮಹೇಶ್ ಭಟ್ ಅವರ ನಿಜವಾದ ಹೆಸರು ‘ಅಸ್ಲಂ’ ಎಂದು ಹೇಳಲಾಗಿದೆ. ಅವರು ತಮ್ಮ ಎರಡನೇ ಪತ್ನಿ  ಸೋನಿ ರಾಜ್ದಾನ್ ಅವರನ್ನು ಮದುವೆಯಾಗಲು ಅವರು ಮತಾಂತರಗೊಂಡಿದ್ದಾರೆ.  ನಿಜಕ್ಕೂ ಅಸ್ಲಂ ಎನ್ನುವುದು ಸುಂದರವಾದ ಹೆಸರು, ಅದನ್ನು ಏಕೆ ಮರೆಮಾಚಿದ್ದಾರೆ?” ಎಂದು ಕಂಗನಾ ಪ್ರಶ್ನಿಸಿದ್ದಾರೆ.

ಕಂಗನಾ ಅವರು ಹಂಚಿಕೊಂಡಿರುವ ಮತ್ತೊಂದು ಕ್ಲಿಪ್‌ನೊಂದಿಗೆ ಮಹೇಶ್ ಭಟ್ ಅವರ ಹೇಳಿಕೆ ಕೂಡ ಇದ್ದು, ಅದರಲ್ಲಿ ಕಂಗನಾ “ಅವರು ಮತಾಂತರಗೊಂಡಾಗ ತಮ್ಮ ನಿಜವಾದ ಹೆಸರನ್ನು ಬಳಸಬೇಕು. ನಿರ್ದಿಷ್ಟ ಧರ್ಮವನ್ನು ಪ್ರತಿನಿಧಿಸಬಾರದು” ಎಂದು ಬರೆದಿದ್ದಾರೆ.

Home add -Advt

ಬೆಳಗಾವಿಯಲ್ಲಿ ಗುಡುಗು, ಮಿಂಚಿನೊಂದಿಗೆ ಅಬ್ಬರಿಸಿದ ಮಳೆ

Related Articles

Back to top button