Kannada NewsKarnataka NewsLatest

*ಡಿಡಿಪಿಐ ಹಾಗೂ ಇಬ್ಬರು ಉಪನ್ಯಾಸಕರು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಐಇಡಿಎಸ್ ಎಸ್ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಆರೋಪಕ್ಕೆ ಸಂಬಂಧಿಸಿದಂತೆ ವಿಜಯಪುರ ಡಿಡಿಪಿಐ ಹಾಗೂ ಇಬ್ಬರು ಹಿರಿಯ ಉಪನ್ಯಾಸಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ವಿಜಯಪುರ ಡಿಡಿಪಿಐ ಎನ್. ಹೆಚ್. ನಗೂರು ಹಾಗೂ ವಿಜಯಪುರ ಡಯಟ್ ಹಿರಿಯ ಉಪನ್ಯಾಸಕ ಎಸ್ ಎ ಮುಜಾವರ, ಎ ಎಸ್ ಹತ್ತಳ್ಳಿ ಅಮಾನತುಗೊಂಡವರು.

2009-10 ಹಾಗೂ 2011-12 ರಲ್ಲಿ ಐಇಡಿಎಸ್ ಎಸ್ ಯೋಜನೆ ಅನುದಾನ ದುರುಪಯೋಗ ಹಾಗೂ ಅಸ್ತಿತ್ವದಲ್ಲಿಯೇ ಇರದ ಎನ್ ಜಿಒ ಗಳಿಗೆ ಹಣ ಬಿಡುಗಡೆ ಮಾಡಿದ ಆರೋಪದಲ್ಲಿ ಡಿಡಿಪಿಐ ಸೇರಿ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಚಾರಣೆ ಕಾಯ್ದಿರಿಸಿ ಮೂವರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Home add -Advt

Related Articles

Back to top button