Latest

ಟೆಕ್ಕಿ ಪತಿಯ ಡ್ರಗ್ಸ್ ಕಿರುಕುಳಕ್ಕೆ ಬೇಸತ್ತ ಪತ್ನಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ದಿನದಿಂದ ದಿನಕ್ಕೆ ಆತಂಕವನ್ನು ಸೃಷ್ಟಿಸಿದ್ದು, ಇದೀಗ ಪತಿಯ ಡ್ರಗ್ಸ್ ಕಾಟ ತಾಳಲಾರದೇ ಪತ್ನಿಯೋರ್ವರು ಪೊಲೀಸ್ ಠಾಣೆ ಮೊರೆಹೋಗಿರುವ ಘಟನೆ ನಡೆದಿದೆ.

ಬೆಂಗಳೂರಿನ ಕೋರಮಂಗಲದ ನಿವಾಸಿ ಟೆಕ್ಕಿ ಲೋಹಿತ್ ವಿರುದ್ಧ ಪತ್ನಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪತಿ ಲೋಹಿತ್ ಮನೆಯಲ್ಲೇ ಕುಳಿತು ಡ್ರಗ್ಸ್ ಸೇವನೆ ಮಾಡುವುದಲ್ಲದೇ ತನಗೂ ಸೇವಿಸುವಂತೆ ಬಲವಂತಮಾಡುತ್ತಿದ್ದಾನೆ. ಈತನ ಡ್ರಗ್ಸ್ ವ್ಯಸನಕ್ಕೆ ಆತನ ಪೋಷಕರೇ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Home add -Advt

ಲೋಹಿತ್ ತಂದೆ ಕೃಷ್ಣಪ್ಪ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಲೋಹಿತ್ ತಂದೆ-ತಾಯಿಯೇ ಆತನ ದುಶ್ಚಟಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಪತಿಯ ಡ್ರಗ್ಸ್ ಸೇವನೆ ಕುರಿತ ವಿಡಿಯೋವನ್ನು ಕೂಡ ಮಹಿಳೆ ಪೊಲೀಸರಿಗೆ ನೀಡಿದ್ದಾರೆ.

Related Articles

Back to top button