Latest

ಬಿಕಿನಿಯಲ್ಲಿ ಮಹಿಳೆಗೆ ಪ್ರ್ಯಾಂಕ್ ; ಸಾರಾ ನಾಟಕ ನೋಡಿ ಹಿಗ್ಗಾ ಮುಗ್ಗಾ ತರಾಟಗೆ ತೆಗೆದುಕೊಂಡ ಫ್ಯಾನ್ಸ್ ; ಸ್ವಿಮ್ಮಿಂಗ್ ಪೂಲ್ ಎದುರು ಬಾಲಿವುಡ್ ನಟಿ ಹುಚ್ಚಾಟ

ಪ್ರಗತಿವಾಹಿನಿ ಸುದ್ದಿ; ಮುಂಬೈ: ನಟ-ನಟಿಯರು ಸದಾ ಸುದ್ದಿಯಲ್ಲಿರಲು ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಒಬ್ಬರಿಗೊಬ್ಬರು ಸ್ಪರ್ಧೆ ರೀತಿಯಲ್ಲಿ ದಿನಕ್ಕೊಂದು ಅವತಾರಗಳಲ್ಲಿ ಅಭಿಮಾನಿಗಳನ್ನು ತಮ್ಮತ್ತ ಸೆಳೆಯಲು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಶೇರ್ ಮಾಡುವ ಮೂಲಕ ಇನ್ನಷ್ಟು ಗಮನ ಸೆಳೆಯುತ್ತಾರೆ. ಹೀಗೆ ಮಾಡಲು ಹೋಗಿ ಕೆಲವೊಮ್ಮೆ ಸೆಲೆಬ್ರಿಟಿಗಳು ನಡೆದುಕೊಳ್ಳುವ ರೀತಿ ಸಾಕಷ್ಟು ಟೀಕೆಗೂ ಕಾರಣವಾಗುತ್ತೆ. ಇದೀಗ ಬಾಲಿವುಡ್ ನಟಿ ಸಾರಾ ಅಲಿಖಾನ್ ವಿಷಯದಲ್ಲೂ ಹೀಗೆ ಆಗಿದೆ.

ಸಾರಾ ಅಲಿಖಾನ್ ಪ್ರ್ಯಾಂಕ್ ಮಾಡಲು ಹೋಗಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಸ್ವಿಮ್ಮಿಂಗ್ ಪೂಲ್ ಎದುರು ಬಿಕಿನಿಯಲ್ಲಿ ನಿಂತಿದ್ದ ಸಾರಾ, ಮಹಿಳೆಯೊಬ್ಬರ ಬಳಿ ಫೋಟೋಗೆ ಪೋಸ್ ನೀಡುವಂತೆ ನಾಟಕವಾಡಿ, ಮಹಿಳೆಯನ್ನು ಏಕಾಏಕಿ ನೀರಿಗೆ ತಳ್ಳಿದ್ದಾರೆ.

ಬಳಿಕ ಅವರನ್ನು ಸ್ವಿಮ್ಮಿಂಗ್ ಪೂಲ್ ನಲ್ಲಿ ಆಳವಿರುವ ಕಡೆ ಕರೆದುಕೊಂಡಲು ಹೋಗಲು ಯತ್ನಿಸಿದ್ದಾರೆ ಆದರೆ ಸಾಧ್ಯವಾಗಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರಾ ಹುಚ್ಚಾಟಕ್ಕೆ ನೆಟ್ಟಿಗರು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದುವೇಳೆ ಮಹಿಳೆಯನ್ನು ತಳ್ಳಿದ ರಭಸಕ್ಕೆ ಅವರ ತಲೆಗೆ ಪೆಟ್ಟಾಗಿದ್ದರೆ ಏನು ಗತಿ? ಎಂದು ಕೆಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸೆಲೆಬ್ರಿಟಿ ಎಂದ ಮಾತ್ರಕ್ಕೆ ಏನುಬೇಕಾದ್ರೂ ಮಾಡಬಹುದೆ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಇದೆಂಥ ಮಕ್ಕಳಾಟವೇ? ಮಹಿಳೆಯನ್ನು ಹೀಗೆ ಏಕಾಏಕಿ ನೀರಿಗೆ ತಳ್ಳಿದ್ದೀರಿ ನಿಮಗೆ ಏನೂ ಅನಿಸುತ್ತಿಲ್ಲವೇ? ನಿಮಗೂ ಹೀಗೆ ಮಾಡಿದರೆ ಹೇಗನಿಸುತ್ತೆ? ಎಂದು ನೂರಾರು ಪ್ರಶ್ನೆ ಮೂಲಕ ಬೈದಿದ್ದಾರೆ.
ವೈಫ್ ಸ್ವಾಪಿಂಗ್ ; ಸಮಾನ ಮನಸ್ಕರನ್ನು ಆಹ್ವಾನಿಸುತ್ತಿದ್ದ; ಬೆಂಗಳೂರಲ್ಲಿ ವ್ಯಕ್ತಿ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button