Karnataka NewsUncategorized

ಖಾನಾಪುರದಲ್ಲಿ ಮಿಕ್ಸರ್ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚುನಾವಣೆ ನೀತಿ ಸಂಹಿತೆ ಘೋಷಣೆಗೆ ಮುನ್ನವೇ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ತಪಾಸಣೆ ಮುಂದುವರಿದಿದ್ದು, ಗುರುವಾರವೂ ಅಪಾರ ಪ್ರಮಾಣದಲ್ಲಿ ಹಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಾನಾಪುರ ತಾಲೂಕಿನ ಲೋಂಡಾದಲ್ಲಿ 62,500 ರೂ. ಮೌಲ್ಯದ 25 ಮಿಕ್ಸರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕೋಡಿಯ ನಾಗರಾಳ ಗ್ರಾಮದ ಪಂಚಾಯತಿ ವ್ಯಾಪ್ತಿಯಲ್ಲಿ  ಬುಧವಾರ ಅಕ್ರಮವಾಗಿ ಸಾಗಾಟ ಮತ್ತು ಮಾರಾಟ ಮಾಡುವ ಉದ್ದೇಶದಿಂದ  ಸಾಗಾಣಿಕೆ ಮಾಡುತ್ತಿದ್ದ ವಾಹನ ಸಮೇತ 21,600 ಲೀ ಮದ್ಯ ವನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಗಜಾನನ ಬಾಬು ಮಾನೆ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಬೆಳಗಾವಿಯ ಉದ್ಯಮಬಾಗ್ ಪೊಲೀಸರು 7.50 ಲಕ್ಷ ರೂ. ಮೌಲ್ಯದ ಮದ್ಯಗಳನ್ನು ವಶಪಡಿಸಿಕೊಂಡು ಖಾಸಬಾಗ ಬಸವನಗಲ್ಲಿಯ ಪರಸರಾಮ ಬಾಹುರಾವ್ ಪೆಡ್ನೇಕರ್ ಎಂಬಾತನನ್ನು ಬಂಧಿಸಿದ್ದಾರೆ.

https://pragati.taskdun.com/karnatakarain-updateimd/

Home add -Advt

Related Articles

Back to top button