Latest

4 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ: ಪೊಲೀಸರು ಫುಲ್ ಅಲರ್ಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಂಗಳೂರಿನ 4 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸರಿಗೆ ಇ ಮೇಲೆ ಬೆದರಿಕೆ ಬಂದಿದ್ದು, ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ 4 ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಮೇಲ್ ಮೂಲಕ ತಿಳಿಸಲಾಗಿದೆ. ಹಾಗಾಗಿ ತಕ್ಷಣ ಎಲ್ಲ ಕಡೆ ಪೊಲೀಸರನ್ನು ರವಾನಿಸಲಾಗಿದೆ. ಯಾವ ಯಾವ ಶಾಲೆ ಎನ್ನುವ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಇ ಮೇಲೆ ಬಂದಿರುವುದನ್ನು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದು, ಇದು ಹುಸಿ ಬೆದರಿಕೆಯೋ , ಸತ್ಯಾಂಶವಿದೆಯೋ ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಉಲ್ಲೇಖಿಸಲಾಗಿರುವ ಎಲ್ಲ ಶಾಲೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಬಾಂಬ್ ಸ್ಕ್ವಾಡ್, ಶ್ವಾನ ದಳ ರವಾನಿಸಲಾಗಿದೆ.

Home add -Advt

ದಂಪತಿ ಒಟ್ಟಿಗೆ ಮಲಗುವಂತಿಲ್ಲ; ಆಲಿಂಗನ, ಕಿಸ್ ಕೂಡ ಕೊಡುವಂತಿಲ್ಲ!

Related Articles

Back to top button