Belagavi NewsBelgaum NewsKannada NewsKarnataka NewsLatest

*ಬಾಂಬೆ ಸಾರ್ವಜನಿಕ ನ್ಯಾಸ ತಿದ್ದುಪಡಿ ವಿಧೇಯಕ ಅಂಗೀಕಾರ*

ಪ್ರಗತಿವಾಹಿನಿ ಸುದ್ದಿ: ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಬಾಂಬೆ ಸಾರ್ವಜನಿಕ ನ್ಯಾಸ ತಿದ್ದುಪಡಿ ವಿಧೇಯಕ, 2025 ನ್ನು ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.

ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಈ ವಿಧೇಯಕವನ್ನು ಪರ್ಯಾಲೋಚಿಸಿ, ಅಂಗಿಕರಿಸುವಂತೆ ಕೋರಿದರು.

ವಿಧೇಯಕದ ಬಗ್ಗೆ ಶಾಸಕರಾದ ಐವನ್ ಡಿಸೋಜ, ಪಿ.ಹೆಚ್ ಪೂಜಾರ್, ಸಂಕನೂರ್ ಮಾತನಾಡಿದರು. ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.

Home add -Advt

ಬಾಂಬೆ ಸಾರ್ವಜನಿಕ ನ್ಯಾಸ ಕರ್ನಾಟಕ ತಿದ್ದುಪಡಿ ವಿಧೇಯಕ-2025ಕ್ಕೆ ಮೇಲ್ಮನೆಯಲ್ಲಿ ಅಂಗೀಕಾರ

ಕರ್ನಾಟಕ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿರುವ ಬಾಂಬೆ ಸಾರ್ವಜನಿಕ ನ್ಯಾಸ (ಕರ್ನಾಟಕ ತಿದ್ದುಪಡಿ) ವಿಧೇಯಕ-2025ಕ್ಕೆ ಮೇಲ್ಮನೆಯಲ್ಲಿ ಡಿ.18ರಂದು ಅಂಗೀಕಾರ ದೊರೆಯಿತು.

ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಮನವಿ ಮಾಡಿದರು.

ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಇವರನ್ನು ಧರ್ಮಾದಾಯ ಆಯುಕ್ತರನ್ನಾಗಿ., ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಜಂಟಿ ಧರ್ಮಾದಾಯ ಆಯುಕ್ತರನ್ನಾಗಿ., ಸಂಬಂಧಪಟ್ಟ ಉಪ ವಿಭಾಗದ ಉಪ ವಿಭಾಗಾಧಿಕಾರಿಯು ಉಪ ಧರ್ಮಾದಾಯ ಆಯುಕ್ತರನ್ನಾಗಿ ಮತ್ತು ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರು ಸಹಾಯಕ ಧರ್ಮಾದಾಯ ಆಯುಕ್ತರನ್ನಾಗಿ ನೇಮಿಸಲು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಿ ಈ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. ಸಭಾಪತಿಗಳು, ವಿಧೇಯಕದ ಅಂಗೀಕಾರಕ್ಕಾಗಿ ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿದರು. ಪ್ರಸ್ತಾವಕ್ಕೆ ಪರಿಷತ್ತಿನಿಂದ ಅನುಮೋದನೆ ದೊರೆಯಿತು.

Related Articles

Back to top button