Latest

ಕೀವ್ ನಲ್ಲಿರುವ ಟೀವಿ ಟವರ್ ಮೇಲೆ ಬಾಂಬ್ ದಾಳಿ ; ಸ್ಥಗಿತಗೊಂಡ ಟಿವಿ ಚಾನಲ್ 

 ಕೀವ್  – ರಷ್ಯಾ ಸೈನಿಕರು ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಟೀವಿ ಟವರ್ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ.
ಹಾಗಾಗಿ ಉಕ್ರೇನ್ ರಾಜಧಾನಿಯಿಂದ ಪ್ರಸಾರವಾಗುತ್ತಿದ್ದ ಎಲ್ಲಾ ಟಿವಿ ಚಾನೆಲ್ ಪ್ರಸಾರ ನಿಲ್ಲಿಸಿವೆ. ಯಾವುದೇ ಸುದ್ದಿ ವಾಹಿನಿಗಳು ಪ್ರಸಾರವಾಗುತ್ತಿಲ್ಲ.
ಇದಕ್ಕೂ ಮುನ್ನ ರಷ್ಯಾ ಸೇನೆ ಕೀವ್ ನಗರದ ರಕ್ಷಣಾ ಕೇಂದ್ರದ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಆದರೆ ಇದರ ಮಧ್ಯೆ ಟಿವಿ ಚಾನೆಲ್ ಮೇಲೆ ದಾಳಿ ನಡೆಸಿ ಯುದ್ಧದ ಪರಿಸ್ಥಿತಿ ಬಗ್ಗೆ ಮಾಹಿತಿ ಹೊರಗೆ ಹೋಗದಂತೆ ನೋಡಿಕೊಂಡಿದೆ.
ಅಂಕಿ-ಸಂಖ್ಯೆಗಳನ್ನು ನೀಡುತ್ತಿದ್ದ ಹಿನ್ನೆಲೆ ಅದನ್ನು ನಿಗ್ರಹಿಸಿಲು ರಷ್ಯಾ ಮುಂದಾಗಿತ್ತು. ಅದಕ್ಕಾಗಿಯೇ ಉಕ್ರೇನಿಯನ್ ರಾಜಧಾನಿಯಲ್ಲಿನ ‘ಸೆಂಟರ್ ಫಾರ್ ಇನ್ಫಾರ್ಮೇಶನ್ ಅಂಡ್ ಸೈಕಲಾಜಿಕಲ್ ಆಪರೇಷನ್ಸ್’ ವಿರುದ್ಧ ದಾಳಿ ನಡೆಸುವುದಾಗಿ ರಷ್ಯಾ ಎಚ್ಚರಿಕೆ ನೀಡಿತ್ತು.
ರಷ್ಯಾ ದೇಶದ ಟಿವಿ ಚಾನೆಲ್​ಗಳನ್ನು ವಿಶ್ವದ ಹಲವು ದೇಶಗಳು ನಿಷೇಧಿಸಿವೆ, ಮಾತ್ರವಲ್ಲದೆ ರಷ್ಯಾ ವಿರುದ್ಧ ಕಠಿಣ ಅರ್ಥಿಕ ದಿಗ್ಬಂಧನಗಳನ್ನು ವಿಧಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button