Kannada NewsKarnataka NewsLatest

ಮಹಾರಾಷ್ಟ್ರದಲ್ಲಿ ತಲ್ಲಣವೆಬ್ಬಿಸಿದ ಬೊಮ್ಮಾಯಿ ಮಾಸ್ಟ್ರ್ ಸ್ಟ್ರೋಕ್!; ಇಂಗು ತಿಂದ ಮಂಗನಂತಾದ ಮಹಾನಾಯಕರು!!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಸುಮಾರು 70 ವರ್ಷಗಳಿಂದಲೂ ಗಡಿ ವಿವಾದ  ಎಬ್ಬಿಸುವ ಮೂಲಕ ಕನ್ನಡಿಗರನ್ನು ಕೆಣಕುತ್ತ ಬಂದಿರುವ ಮಹಾರಾಷ್ಟ್ರದಲ್ಲೀಗ ಅಕ್ಷರಶಃ ಬಿರುಗಾಳಿ ಎದ್ದಿದೆ. ಮಹಾರಾಷ್ಟ್ರದ ನಾಯಕರು ಈಗ ಇಂಗು ತಿಂದ ಮಂಗನಂತಾಗಿದ್ದಾರೆ. ದೋಣಿಯಲ್ಲಿ ಕುಳಿತು ಕೀಲು (ಬೆಣೆ) ತೆಗೆದು ಬಾಲಸಿಕ್ಕಿಸಿಕೊಂಡ ಮಂಗನಂತಾಗಿದೆ ಅವರ ಪರಿಸ್ಥಿತಿ.

ಇಷ್ಟಕ್ಕೂ ಕಾರಣ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ ನೀಡಿದ ಮಾಸ್ಟರ್ ಸ್ಟ್ರೋಕ್.

ಇದೇ ಮೊದಲ ಬಾರಿಗೆ ಮಹಾರಾಷ್ಟ್ರಕ್ಕೆ ಸಿಎಂ ಬೊಮ್ಮಾಯಿ ಮಾಸ್ಟರ್ ಸ್ಟ್ರೋಕ್!

ಜತ್ ತಾಲೂಕಿನಲ್ಲಿ ತೀವ್ರ ಬರಗಾಲದಿಂದಾಗಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲಿನ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಅಲ್ಲಿನ ಗ್ರಾಮಪಂಚಾಯಿತಿಗಳು ಒತ್ತಾಯಿಸುತ್ತಿದ್ದು, ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನವೆಂಬರ್ 22ರಂದು ಹೇಳಿದ್ದರು.

ಜೊತೆಗೆ,  ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ತೀರ್ಮಾನಿಸಿದ್ದೇವೆ. ಮಹಾರಾಷ್ಟ್ರಲ್ಲಿರುವ ಕನ್ನಡಿಗರು ಯಾರು ಏಕೀಕರಣ, ಸ್ವಾತಂತ್ರ್ಯ ಹೋರಾಟ ನಿಟ್ಟಿನಲ್ಲಿ ಭಾಗಿಯಾಗಿದ್ದರು. ಅವರ ದಾಖಲೆಗಳನ್ನು ತರಿಸಿ ಅವರಿಗೆ ಪಿಂಚಣಿ ಕೊಡಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ ಕನ್ನಡಿಗರು ಬಹುದೊಡ್ಡ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಅಲ್ಲಿರುವ ಕನ್ನಡಿಗರ ರಕ್ಷಣೆ ಹಿತ ಕಾಯುವುದು ನಮ್ಮ ಕರ್ತವ್ಯ ಎಂದೂ ಹೇಳಿಕೆ ನೀಡಿದ್ದರು.

ಇಲ್ಲಿಯವರೆಗೂ ಮಹಾರಾಷ್ಟ್ರ ಎಷ್ಟೇ ಕೆಣಕಿದರೂ ಕರ್ನಾಟಕ ಸೌಮ್ಯವಾಗಿಯೇ ನಡೆದುಕೊಂಡು ಬಂದಿದೆ. ಹಾಗಾಗಿ ಮಹಾರಾಷ್ಟ್ರದ ನಾಯಕರು ತಮ್ಮ ಉದ್ದಟತನವನ್ನು ಮುಂದುವರಿಸುತ್ತಲೇ ಬಂದಿದ್ದಾರೆ. ಇದೀಗ ಮೊದಲ ಬಾರಿಗೆ ನಿಮ್ಮ ನೆಲವನ್ನು ಕೆಣಕಲು ನಮಗೂ ಬರುತ್ತದೆ ಎಂದು ಬೊಮ್ಮಾಯಿ ತೋರಿಸಿದರು. ಇದರಿಂದಾಗಿ ಮಹಾರಾಷ್ಟ್ರದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ.

ಜತ್ ತಾಲೂಕಿನ ಜನರು ಮಹಾರಾಷ್ಟ್ರ ಸರಕಾರಕ್ಕೇ ಗಡುವು ನೀಡಿದ್ದಾರೆ. 8 ದಿನಗಳ ಗುಡುವು ನೀಡಿ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ನಾವು ಕರ್ನಾಟಕ ಸೇರುವುದಾಗಿ ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರಕ್ಕೆ 8 ದಿನಗಳ ಗಡುವು; ಖಡಕ್ ಎಚ್ಚರಿಕೆ ಕೊಟ್ಟ ಜತ್ ತಾಲೂಕು ಜನತೆ

 

ಮಹಾರಾಷ್ಟ್ರ ಸರ್ಕಾರಕ್ಕೆ ಬಿಗ್ ಶಾಕ್; ಕರ್ನಾಟಕಕ್ಕೆ ಹೋಗುವುದಾಗಿ ಮತ್ತೊಂದು ತಾಲೂಕಿನ ಜನತೆ ಪಟ್ಟು

ಇದೀಗ ಅಕ್ಕಲಕೋಟೆ, ಪಂಡರಾಪುರ ಮೊದಲಾದ ಪ್ರದೇಶದ ಜನರೂ ಮಹಾರಾಷ್ಟ್ರ ಸರಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ತಾವು ಕರ್ನಾಟಕ್ಕ್ಕೆ ಹೋಗುವುದಾಗಿ ಘೋಷಿಸಿದ್ದಾರೆ.

5 ದಶಕಗಳಿಂದ ಮಹಾರಾಷ್ಟ್ರ ಸರ್ಕಾರ ಗಡಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಕುಡಿಯುವ ನೀರು, ರಸ್ತೆ, ಕನ್ನಡ ಶಾಲೆಗಳಿಗೆ ಸೌಲಭ್ಯ ಸಿಕ್ಕಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗಡಿ ಕನ್ನಡಿಗರು ದಿನದಿಂದ ದಿನಕ್ಕೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮಹಾಜನ್ ಆಯೋಗದ ವರದಿಯಂತೆ ನಾವೂ ಕರ್ನಾಟಕ್ಕೆ ಸೇರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

ಗಡಿ ಗ್ರಾಮಗಳ ಅಭಿವೃದ್ಧಿಗೆ ಮಹಾರಾಷ್ಟ್ರ ಸರ್ಕಾರ ತಕ್ಷಣ ಮುಂದಾಗಬೇಕು. ಇಲ್ಲವಾದಲ್ಲಿ ನಮ್ಮನ್ನು ಕರ್ನಾಟಕ್ಕೆ ಹೋಗಲು ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಮಹಾರಾಷ್ಟ್ರ ನಾಯಕರು ಅಕ್ಷರಶಃ ಕಂಗಾಲಾಗಿದ್ದಾರೆ. ಕರ್ನಾಟಕವನ್ನು ಕೆಣಕುವುದಿರಲಿ, ತಮ್ಮ ನೆಲದಲ್ಲಿ ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದೇ ದೊಡ್ಡ ಸವಾಲಾಗಿದೆ. ಕರ್ನಾಟಕಕ್ಕೆೆ ಬಂದು ಕೊಳ್ಳಿ ಇಡುವವರಿಗೆ ಅವರದೇ ಜನ ಈಗ ಬುದ್ದಿ ಕಲಿಸಲು ಮುಂದುಗಿದ್ದಾರೆ. ಇನ್ನಾದರೂ ಎಂಇಎಸ್ ಪುಂಡರು, ಮಹಾರಾಷ್ಟ್ರ ನಾಯಕರು ಎಚ್ಚೆತ್ತು ಗಡಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು.

 

https://pragati.taskdun.com/cm-basavaraj-bommaijath-talukukarnatakamaharashtra-kannada-school/

https://pragati.taskdun.com/jath-taluqwater-problemkarnataka-maharashtra-border-issue/

https://pragati.taskdun.com/karnataka-maharastrea-border-issueakkalakota-villagekarnatakamahajan-report/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button