Kannada NewsKarnataka NewsLatest

ಸಂಭ್ರಮದಿಂದ ನಡೆದ ಯಡೂರಿನ ಕಾರ್ತೀಕ ದೀಪೋತ್ಸವ

ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಹಲವಾರು ಕುಟುಂಬಗಳ ಆರಾಧ್ಯ ದೈವವಾದ ಚಿಕ್ಕೊಡಿ ತಾಲೂಕಿನ ಸುಕ್ಷೇತ್ರ ಯಡೂರಿನಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಸಂಭ್ರಮ ದಿಂದ ನೆರವೇರಿತು.

ಯಡೂರಿನ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ದೇಶ್ವರ ಸಂಸ್ಥಾನ ಮಠ ಲಕ್ಷ ಲಕ್ಷ ದೀಪಗಳಿಂದ ಕಂಗೊಳಿಸಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಭಕ್ತ ಸಾಗರ ಶ್ರೀಕ್ಷೇತ್ರ ಯೆಡೂರನ್ನು ಕಣ್ತುಂಬಿಕೊಂಡರು. ಲಕ್ಷ ದೀಪೋತ್ಸವ ಕಾರ್ತಿಕ ಮಾಸದ ಕೊನೆಯ ದಿನವಾದ ಮಂಗಳವಾರ ಸಾಯಂಕಾಲದವರೆಗೆ ಸುಮಾರು ಹತ್ತು ಸಾವಿರಕ್ಕಿಂತ ಜನರು ವೀರಭದ್ರ ದೇವರ ದರ್ಶನ ಪಡೆದರು.

ಕಾರ್ತಿಕ ದೀಪೋತ್ಸವವನ್ನು ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ವೀರಭದ್ರ ದೇವಸ್ಥಾನ ಮತ್ತು ಕಾಡಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿಗಳಾದ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ವಿಧಾನ ಪರಿಷತ್ತಿನ ಸದಸ್ಯ ಹಾಗೂ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಿಗಿಮಠ ಉದ್ಘಾಟಿಸಿದರು.

ಈ ವೇಳೆ ಶ್ರೀಶೆೈಲ ಪೀಠದ ಜಗದ್ಗುರುಗಳಾದ ಡಾ ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳು ಮಾತನಾಡಿ ಕಾರ್ತಿಕ ದೀಪೋತ್ಸವ ನಮ್ಮ ಮನಸ್ಸಿನ ಅಂತರಂಗ ಹಾಗೂ ಬಹಿರಂಗದ ಮನಸ್ಸನ್ನು ಸದೃಢಗೊಳಿಸುತ್ತದೆ. ಅಂತರಂಗದ ಆಚಾರ ಎಂಬ ಎಣ್ಣೆ ಜ್ಞಾನ ಎಂಬ ಭಕ್ತಿ ಅರಿವು ಎಂಬ ಜ್ಯೋತಿಯ ಹಣತೆ ಉರಿಯುತ್ತಿರಲು ಒಳಗೆ ಬೆಳುಕು ಹೊರಗೆ ಬೆಳಕು ಇದು ಕಾರ್ತಿಕ್ ಮಾಸದೆ ಹೊನಲು ಎಂದು ಹೇಳಿದರು.

ಸದರಿ ಕಾರ್ತಿಕ ದೀಪೋತ್ಸವವನ್ನು ಯಡೂರ ಗ್ರಾಮದ ಕಾಡಸಿದ್ಧೇಶ್ವರ ಸಂಸ್ಥಾನಮಠ ಹಾಗೂ ವೀರಭದ್ರ ದೇವಸ್ಥಾನ ಮತ್ತು ಸಂಸ್ಥಾನಮಠದ ಪಾಠಶಾಲೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ತಿಕ ದೀಪೋತ್ಸವಕ್ಕೆ ಒಪ್ಪು ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ಜೈನಾಪುರ ಪಪ್ಪು ಗುರು ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಸಂಸ್ಥಾನಮಠ ಮಂತ್ರಿ ಇವರು ನೇತೃತ್ವ ವಹಿಸಿದ್ದರು ಮಾನವ ಕುಲವನ್ನು ಅಜ್ಞಾನದಿಂದ ಜ್ಞಾನ ಕಡೆಗೆ ಕೊಂಡು ಒಯ್ಯುವುದು ದೀಪೋತ್ಸವ ಉದ್ದೇಶ.

ಹಬ್ಬಗಳಲ್ಲಿ ಧಾರ್ಮಿಕ ಆಚರಣೆ ಜೊತೆಗೆ ವೈಜ್ಞಾನಿಕತೆ ಹಿನ್ನೆಲೆಯನ್ನು ಒಳಗೊಂಡಿದ್ದು ಕಾರ್ತಿಕ ದೀಪೋತ್ಸವ ಹಿಂದೆಯೇ ಅಂತಹ ಉದ್ದೇಶವಿದು ರೈತರ ಬೆಳೆಗಳಿಗೆ ಹಾನಿ ಮಾಡುವ ಕ್ರಿಮಿ ಕೀಟಗಳನ್ನು ಆಕರ್ಷಿಸಲು ದೀಪೋತ್ಸವ ಸಹಕಾರಿಯಾಗಲಿದ್ದು ರೈತರ ಬೆಳೆ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ಮಹಾಂತೇಶ್ ಕವಟಗಿಮಠ ಹೇಳಿದರು.

ಈ ಕಾರ್ತಿಕ ದೀಪೋತ್ಸವಕ್ಕೆ ಮಲ್ಲಯ್ಯಾ ಜಡೆ ಅಡವಯ್ಯ ಅರಳಿಕಟ್ಟಿ ಮಠ್ ಮಲ್ಲಪ್ಪ ಸಿಂಧೂರ ಮಂಜುನಾಥ್ ದೇವರು ವಿಶ್ವನಾಥ್ ದೇವರು ಮುತ್ತಯ್ಯ ಮಠದ್ ಸಚಿನ್ ಪಾಟೀಲ್ ಪಾಠಶಾಲೆಯ ಗುರುಗಳು, ವಿದ್ಯಾರ್ಥಿಗಳು ಹಾಗೂ ಭಕ್ತರು ಹಾಜರಿದ್ದರು

ಯಡೂರು ಗ್ರಾಮದ ಶ್ರೀ ವೀರಭದ್ರ ದೇವಸ್ಥಾನ ಹಾಗೂ ಕಾಡ ಸಿದ್ದೇಶ್ವರ ಸಂಸ್ಥಾನ ಮಠದಿಂದ ಆಯೋಜಿಸಲಾದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವಾಗ ಶ್ರೀಶೈಲ ಪೀಠದ ಜಗದ್ಗುರುಗಳು ಹಾಗೂ ವಿಧಾನಪರಿಷತ್ತಿನ ಸದಸ್ಯರಾದ ಮಹಾಂತೇಶ್  ಕವಟಗಿಮಠ ಮೊದಲಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button