Belagavi NewsBelgaum NewsPolitics
*ಅಸೂಯೆಯ ರಾಜಕಾರಣಕ್ಕಿಂತ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿ: ವಿರೋಧಿಗಳ ಮೇಲೆ ಶಾಸಕಿ ಶಶಿಕಲಾ ಜೊಲ್ಲೆ ವಾಗ್ದಾಳಿ*
ಬೋರಗಾಂವ ಪಟ್ಟಣದಲ್ಲಿ ಅಮೃತ-2 ನೀರಿನ ಯೋಜನೆ ಉದ್ಘಾಟನೆ
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಪ್ಪಾಣಿ ಕ್ಷೇತ್ರದಲ್ಲಿ ಅಸೂಯೆಯ ರಾಜಕಾರಣ ನಡೆಯುತ್ತಿದೆ ಎಂದು ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ವಾಗ್ದಾಳಿ ನಡೆಸಿದರು.
ಕರ್ನಾಟಕ ಸರ್ಕಾರದ ವತಿಯಿಂದ 18 ಕೋಟಿ 98 ಲಕ್ಷ ಅನುದಾನದಲ್ಲಿ ಮಂಜೂರಾದ ಅಮೃತ್ 2 ನೀರು ಯೋಜನೆಗೆ ಶಾಸಕಿ ಶಶಿಕಲಾ ಜೊಲ್ಲೆ ಚಾಲನೆ ನೀಡಿ ಮಾತನಾಡಿದರು.
ನಾವು ಯಾವಾಗಲೂ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದೇವೆ. ನಾನು ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಇವರು ಸಂಸದರಾಗಿದ್ದಾಗ ಬೋರಗಾಂವದಲ್ಲಿ ಸುಸ್ಥಿರ ನೀರಿನ ಯೋಜನೆಗೆ 2021ರಲ್ಲಿ ದೆಹಲಿಗೆ ಹೋಗಿ ಪತ್ರ ವಿನಿಮಯ ಮಾಡಿಕೊಂಡಿದ್ದೆವು. ಅಮೃತ 2 ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆದರೆ ವಿರೋಧ ಪಕ್ಷದವರು ಇದರ ಮನ್ನಣೆ ಪಡೆದು ತರಾತುರಿಯಲ್ಲಿ ಉದ್ಘಾಟನೆ ಮಾಡಿದರು ಎಂದರು.
ಸಂಸದರ ಚುನಾವಣೆಗೆ ಏಳು ತಿಂಗಳ ನಂತರವೇ ಹಣ ಮಂಜೂರಾಗಿದೆ ಎಂದು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಪ್ರತಿಪಕ್ಷಗಳು ದಾರಿ ತಪ್ಪಿಸುವ ಬದಲು ಅಭಿವೃದ್ಧಿ ಕಾರ್ಯಗಳತ್ತ ಹೆಚ್ಚು ಗಮನ ಹರಿಸಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.
ನಿಪಾಣಿ ನಗರದ ಜತೆಗೆ ಬೋರಗಾಂವ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೇವೆ.ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿದೀಪ, ಜೊತೆಗೆ ಬೋರಗಾಂವ ವೃತ್ತ ಅಗಲೀಕರಣ,ಬೋರಗಾಂವ ಆಯಾಕೋ ರಸ್ತೆ, 24 ಗಂಟೆ ವಿದ್ಯುತ್, ಬೋರಗಾಂವ್ ಪಾಚ್ ಮೈಲ ರಸ್ತೆ,ನಗರೋತ್ಥಾನ ಯೋಜನೆಯಿಂದ 5 ಕೋಟಿ, ಮುಸ್ಲಿಂ ಸಮುದಾಯಕ್ಕೆ ಶಾದಿ ಮಹಲ್,ಸರ್ವ ಧರ್ಮೀಯರಿಗೂ ಅನ್ಯಾಯ ಮಾಡದೆ ಕೆಲಸ ಮಾಡಿದ್ದೇವೆ.ಈ ಯೋಜನೆಯ ಉದ್ಘಾಟನೆಗೆ ಎಲ್ಲರನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಪ್ರತಿಪಕ್ಷಗಳು ಬೆಳಗ್ಗೆಯೇ ಉದ್ಘಾಟನೆ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸಿದರು. ಅಭಿವೃದ್ಧಿಗಾಗಿ ಒಂದೇ ವೇದಿಕೆಗೆ ಬರಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಹಿರಿಯ ಮುಖಂಡ ರಾಮಗೊಂಡ ಪಾಟೀಲ, ಶ್ರೀಕಾಂತ ಬನ್ನೆ ಜಯಕುಮಾರ ಖೋತ, ಬಿಜೆಪಿ ಮುಖಂಡ ಸುನೀಲ ಪಾಟೀಲ, ಶರದ ಜಂಗಟೆ,ಶೀತಲ್ ಅಮ್ಮಣ್ಣವರ, ಬಾಬಾಸಾಹೇಬ ಚೌಗುಲೆ, ರಮೇಶ ಮಾಲಗಾವೆ, ಶಿವಾಜಿ ಬೋರೆ, ಜಿತೇಂದ್ರ ಪಾಟೀಲ, ಅಮಿತ್ ಮಾಳಿ, ಮಹಿಪತಿ ಖೋತ, ಫಿರೋಜ್ ವಿಷ್ಣು ತೋಡಕರ,ರಾಣಿ ಬೇವನಕಟ್ಟಿ, ಅಕ್ಷಯ ಪವಾರ, ನಮ್ರತಾ ದೇಸಾಯಿ, ಅಜಿತ್ ತೇರ್ದಾಳೆ ಸಂಜಯ ಮಹಾಜನ್, ಸರ್ಜೆರಾವ್ ಧನವಡೆ, ನಾರಾಯಣ ಅಡೇಕರ್, ನಾಗರಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ