
ಪ್ರಗತಿವಾಹಿನಿ ಸುದ್ದಿ: ಸಾಕುನಾಯಿ ಕಾಣೆಯಾಗಿದ್ದಕ್ಕೆ ಅದನ್ನು ಹುಡುಕಿ ಹೊರಟ ಬಾಲಕ ರೈಲು ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಮುದ್ದಲಿಂಗನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. 16 ವರ್ಷದ ಯೋಗೇಂದ್ರ ಮೃತ ಬಾಲಕ. ಪ್ರೀತಿಯಿಂದ ಸಾಕಿದ್ದ ಸಾಕುನಾಯಿ ಕಾಣೆಯಾಗಿತ್ತು. ಇದರಿಂದ ತೀವ್ರವಾಗಿ ಮನನೊಂದಿದ್ದ ಬಾಲಕ ನಾಯಿ ಹುಡುಕಲೆಂದು ತಂದೆ-ತಾಯಿಗೂ ಹೇಳದೇ ತೆರಳಿದ್ದಾನೆ.
ಎಷ್ಟು ಹೊತ್ತಾದರೂ ಬಾಲಕ ಮನೆಗೆ ಬರದಿದ್ದಾಗ ಪೋಷಕರು ಗಾಬರಿಯಾಗಿ ವಿಚಾರಿಸಿದಾಗ ನಾಯಿ ಹುಡುಕುತ್ತಾ ಹೋಗಿರುವುದು ಗೊತ್ತಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಮಗ ನಾಯಿಹುಡುಕುತ್ತಾ ರೈಲು ಹಳಿ ದಾಟುವಾಗ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎಂಬ ಸುದ್ದಿಬಂದಿದೆ. ಮಗನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.



