Karnataka News

*ಆಟವಾಡಲು ಹೋಗಿ ನೀರಿನ ತೊಟ್ಟಿಗೆ ಬಿದ್ದ ಬಾಲಕ: ದಾರುಣ ಸಾವು*

ಪ್ರಗತಿವಾಹಿನಿ ಸುದ್ದಿ: ಶಾಲೆಗೆ ರಜೆಯಿದ್ದ ಕಾರಣ ಆಟವಾಡಲೆಂದು ಹೋಗಿದ್ದ ಬಾಲಕ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಡುರು ಗ್ರಾಮದಲ್ಲಿ ನಡೆದಿದೆ.

ಪ್ರಜ್ವಲ್ ವನಗೆರೆ (9) ಮೃತ ಬಾಲಕ. ಆಟವಾಡಲೆಂದು ಬಾಲಕ ಹೋದವನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ತೆಗೆಯಲಾಗಿದ್ದ ನೀರಿನ ತೊಟ್ಟಿಯಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ.

ಎಷ್ಟು ಹೊತ್ತಾದರೂ ಬಾಲಕ ಮನೆಗೆ ಹಿಂದಿರುಗಿಲ್ಲ. ಇದರಿಂದ ಗಾಬರಿಯಾದ ಪೋಷಕರು ಹುಡುಕಾಟ ನಡೆಸಿದ್ದಾರೆ. ನೀರಿನ ತೊಟ್ಟಿ ಬಳಿ ಬಂದು ನೋಡಿದಾಗ ಬಾಲಕ ನೀರಿನ ತೊಟ್ಟಿಯಲ್ಲಿ ಶವವಾಗಿದ್ದ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Home add -Advt

ರಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button