Latest

*ಪಡಿತರ ಅಕ್ಕಿ ಪಡೆಯುವವರಿಗೆ ಬಿಗ್ ಶಾಕ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ರಾಜ್ಯ ಸರ್ಕಾರ ಶಾಕಿಂಗ್ ಸುದ್ದಿ ನೀಡಿದೆ. ಇನ್ಮುಂದೆ ಪಡಿತರದಾರರಿಗೆ ವಿತರಿಸಲಾಗುತ್ತಿದ್ದ ಅಕ್ಕಿಯಲ್ಲಿ 4 ಕೆಜಿ ಅಕ್ಕಿ ಕಡಿತ ಮಾಡಲಾಗುತ್ತಿದೆ.

ಈವರೆಗೆ ಪಡಿತರದಾರರಿಗೆ ನೀಡಲಾಗುತ್ತಿದ್ದ 10ಕೆಜಿ ಉಚಿತ ಅಕ್ಕಿಯಲ್ಲಿ ಫೆಬ್ರವರಿಯಿಂದ 4ಕೆಜಿ ಅಕ್ಕಿ ಕಡಿತಮಾಡಿ, 6 ಕೆಜಿ ಅಕ್ಕಿ ವಿತರಿಸಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪಡಿತರದಾರರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ರಾಜ್ಯ ಸರ್ಕಾರ ತಲಾ 5 ಕೆಜಿ ಅಕ್ಕಿ ಸೇರಿ 10 ಕೆಜಿ ಅಕ್ಕಿ ವಿತರಿಸುತ್ತಿತ್ತು. ಈಗ ಈ ಅಕ್ಕಿ ಪ್ರಮಾಣವನ್ನು 6ಕೆಜಿಗೆ ಇಳಿಸಲಾಗುತ್ತಿದೆ.

*ಸಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ವಿಪಕ್ಷ ನಾಯಕ: ಅವರು ಇಲಿ, ಬೆಕ್ಕು, ಜಿರಳೆ ತರ ಎನ್ನುತ್ತಲೇ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವ ಶ್ರೀರಾಮುಲು*

Home add -Advt

https://pragati.taskdun.com/siddaramaiahshreeramulucm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button