ಪ್ರಗತಿವಾಹಿನಿ ಸುದ್ದಿ; ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ನಂತರ ಮತ್ತೊಂದು ಮೃತದೆಹ ಪತ್ತೆಯಾಗಿದೆ. ಆದರೆ ಪತ್ತೆ ಹಚ್ವಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಮೃತದೇಹ ಕೊಳೆತುಹೋಗಿದೆ.
ನಾಗತೀರ್ಥ ಸಮೀಪ ಮತ್ತೊಂದು ಶವ ಪತ್ತೆಯಾಗಿದೆ. ಅರ್ಚಕ ನಾರಾಯಣಾಚಾರ್ ಪತ್ತೆಯಾದ ಸ್ಥಳದಿಂದ ಬಹುದೂರದಲ್ಲಿ ಈ ಮೃತದೇಹ ಪತ್ತೆಯಾಗಿದೆ. ಆದರೆ ಮೃತದೇಹ ಹೆಣ್ಣು ಅಥವಾ ಗಂಡು ಎಂದು ಗುರುತಿಸಲಾಗದಷ್ಟು ಕೊಳೆತಿದೆ. ಮಾಹಿತಿ ತಿಳಿದ ಸಚಿವ ಸೋಮಣ್ಣ ಮತ್ತು ಸಂಸದ ಪ್ರತಾಪ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಲಕಾವೇರಿ ಬಳಿಯ ಬ್ರಹ್ಮಗಿರಿ ಬೆಟ್ಟ ಭೂಕುಸಿತ ಸಂಭವಿಸಿ ಕಣ್ಮರೆಯಾಗಿದ್ದ ಐವರ ಪೈಕಿ ಪ್ರಸ್ತುತ ಮೂವರ ಮೃತದೇಹಗಳು ಸಿಕ್ಕಿದೆ. ಇದೀಗ ಸಿಕ್ಕಿರುವ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಯಾರದ್ದೆಂದು ತಿಳಿಯಲಿದೆ. ಸಂಜೆ ಶವ ಸಂಸ್ಕಾರ ನಡೆಯಲಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆಯನ್ನು ಕೈ ಬಿಡುವುದಿಲ್ಲ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ