
ಪ್ರಗತಿವಾಹಿನಿ ಸುದ್ದಿ; ದಾಂಡೇಲಿ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ, ದಾಂಡೇಲಿ ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಸುನಂದಾಜಿ ಅವರು ಪಾರ್ಥಿವಶರೀರವನ್ನು ತ್ಯಜಿಸಿ ಅವ್ಯಕ್ತರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸುಆಗಿತ್ತು.
ಸುನಂದಾಜಿ ಅವರು ಸತತ 48 ವರ್ಷಗಳವರೆಗೆ ಮಾಡಿರುವ ಈಶ್ವರೀಯ ಸೇವೆ ಶ್ಲಾಘನೀಯವಾಗಿದೆ. ಅವರು 1973 ರಿಂದ ಅನೇಕ ವರ್ಷಗಳವರೆಗೆ ಹುಬ್ಬಳ್ಳಿ ವಲಯ ಸಂಚಾಲಕಿಯಾಗಿ ಸೇವೆ ಸಲ್ಲಿಸಿದ್ದರು. ಅವರು ವಯೋಸಹಜಕಾಯಿಲೆಯಿಂದ ಬಳಲುತ್ತಿದ್ದರು. ಕೋವಿಡ್ ನಿಯಮಗಳ ಪ್ರಕಾರ ಈಶ್ವರೀಯ ಗೌರವದೊಂದಿಗೆ ಅಂತಿಮ ಸಂಸ್ಕಾರ ಮಾಡಲಾಯಿತು. ಅವರಿಗೆ ಹುಬ್ಬಳ್ಳಿ ವಲಯದ ಸರ್ವ ಶಿಕ್ಷಕಿ ಸೋದರಿಯರು ಹಾಗೂ ದೈವೀ ಪರಿವಾರದಿಂದ ಭಾವಪೂರ್ವಕ ನಮನಗಳು.