Latest

ಬೆಳಗಾವಿ-ಬಾಗಲಕೋಟೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ಒತ್ತಾಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ನೀಗಿಸಲು ಅನುವಾಗುವಂತೆ ಬಾಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಓಎನ್ ಜಿಸಿ ಸಂಸ್ಥೆಯಿಂದ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ‌ ಮತ್ತು ಶಾಸಕರಾದ ಡಾ.ವೀರಣ್ಣ ಚರಂತಿಮಠ ಅವರು ಅವರು ಒತ್ತಾಯಿಸಿದ್ದಾರೆ.

ಆಕ್ಸಿಜನ್ ಉತ್ಪಾದಕ ಮತ್ತು ವಿತರಕರೊಂದಿಗೆ ಸಮನ್ವತೆ ಸಾಧಿಸಿ ಬೇಡಿಕೆ ಈಡೇರಿಸುವ ಜವಾಬ್ದಾರಿ ಹೊತ್ತಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರನ್ನು ಶಾಸಕರಾದ ಡಾ.ವೀರಣ್ಣ ಚರಂತಿ ಮಠ ಅವರೊಂದಿಗೆ ಡಿಸಿಎಂ ಭೇಟಿ ಮಾಡಿ, ಈ ಎರಡೂ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸುವುದರಿಂದ ಜಿಲ್ಲೆಯಿಂದ 70 ರಿಂದ 80 ಕಿ.ಮೀ ಅಂತರದಲ್ಲಿರುವ ನೆರೆಹೊರೆಯ ನಾಲ್ಕು ಜಿಲ್ಲೆಗಳಿಗೆ ಸುಲಲಿತವಾಗಿ ಆಕ್ಸಿಜನ್ ಅನ್ನು ಸಕಾಲದಲ್ಲಿ ಪೂರೈಕೆ ಮಾಡಿ ಆಕ್ಸಿಜನ್ ಕೊರತೆಯನ್ನು ತ್ವರಿತವಾಗಿ ನೀಗಿಸಬಹುದು ಎಂದರು.

Home add -Advt

ಈ ಘಟಕ ಸ್ಥಾಪನೆಯಿಂದ ಈ ಪ್ರದೇಶದಲ್ಲಿ ಚಿಕಿತ್ಸೆಗೆ ಅವಶ್ಯಕವಾಗುವ ಆಕ್ಸಿಜನ್ ‌ಕೊರತೆಯನ್ನು ಶಾಶ್ವತ ನೀಗಿಸಬಹುದಾಗಿದೆ‌. ಈ ಜಿಲ್ಲೆಗಳು ಆಕ್ಸಿಜನ್ ಉತ್ಪಾದನಾ ಘಕಟವನ್ನು ಸ್ಥಾಪಿಸಲು ಪೂರಕವಾಗಿವೆ ಎಂಬ ಎಲ್ಲಾ ಅಂಶಗಳನ್ನು ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚಿಸಿ, ಪೂರಕವಾಗಿ ಕ್ರಮಕೈಗೊಳ್ಳುವಂತೆ ವಿನಂತಿಸಲಾಗಿದೆ. ಈ‌ ಕುರಿತು ಈಗಾಗಲೇ ಬಾಗಲಕೋಟೆ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ರಾಜ್ಯಾದ್ಯಂತ ಇಂದು ಕೊರೋನಾ ಮಹಾಸ್ಫೋಟ; ಬೆಳಗಾವಿ, ಉತ್ತರ ಕನ್ನಡದಲ್ಲಿ ದೊಡ್ಡ ಶಾಕ್
ರಾಜಯೋಗಿನಿ ಬ್ರಹ್ಮಾಕುಮಾರಿ ಸುನಂದಾಜಿ ಇನ್ನಿಲ್ಲ

Related Articles

Back to top button