Belagavi NewsBelgaum NewsKarnataka News

*ಬೆಳಗಾವಿಯಲ್ಲಿ ಇಂದು ಬ್ರಾಹ್ಮಣ ಸಮಾಜದ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರೀಕ್ಷೆ ವೇಳೆ ಜನಿವಾರ ತೆಗೆಸಿ ಅವಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಇಂದು ಸೋಮವಾರ ಬ್ರಾಹ್ಮಣ ಸಮಾಜದಿಂದ ಪ್ರತಿಭಟನೆ ನಡೆಯಲಿದೆ.

ಶಿವಮೊಗ್ಗ , ಸಾಗರ, ಧಾರವಾಡ ಹಾಗೂ ಬೀದರ್ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಜನಿವಾರವನ್ನು ತೆಗೆದು ಹಾಕಲು ಹಾಗೂ ಕತ್ತರಿಸಿದ ಘಟನೆ ಸಂಭವಿಸಿದ್ದು, ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಹಾಗೂ ಸಂಪ್ರದಾಯಗಳಿಗೆ ಆಘಾತ ತರುವಂತಹದ್ದು.

ಈ ಅನ್ಯಾಯದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಕೆಳಕಂಡಂತೆ ಕಾರ್ಯಕ್ರಮ ಏರ್ಪಡಿಸಲಾಗಿದೆ:

ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ಕನ್ನಡ ಸಾಹಿತ್ಯ ಭವನ
ಮೆರವಣಿಗೆ ಪ್ರಾರಂಭ: ಬೆಳಿಗ್ಗೆ 10:30 ಚನ್ನಮ್ಮ ಸರ್ಕಲ್ ನಲ್ಲಿ ಪ್ರತಿಭಟನೆ ನಂತರ ಡಿಸಿ ಕಚೇರಿಗೆ ಹೋಗಿ ಮನವಿಯನ್ನು ಒಪ್ಪಿಸುವುದು.

ಇದು ನಮ್ಮ ಗುರುತಿನ, ಸಂಸ್ಕೃತಿಯ, ಹಾಗೂ ಧರ್ಮದ ಪ್ರತೀಕ. ನಮ್ಮ ಮೌನ ನಮ್ಮ ಒಪ್ಪಿಗೆಯಲ್ಲ ನಮ್ಮ ಏಕತೆ ಶಕ್ತಿ ಆಗಲಿ. ನಾವೆಲ್ಲರೂ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸೋಣ ಪ್ರತಿಭಟನೆಯನ್ನು ಯಶಸ್ವಿಯಾಗಿಸೋಣ ಎಂದು ಬೆಳಗಾವಿ ಬ್ರಾಹ್ಮಣ ಸಮಾಜ ಕರೆ ನೀಡಿದೆ.



ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button