Kannada NewsKarnataka NewsLatest

*ಮಹಿಳೆಗೆ ಸೈಟ್ ಹಣ ವಾಪಸ್ ಕೊಡಿಸುವುದಾಗಿ ಹೇಳಿ ಮಂಚಕ್ಕೆ ಕರೆದ ಸ್ವಾಮೀಜಿ: ಬ್ರಹ್ಮಾನಂದ ಗುರೂಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ*

ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ಗುರುಕುಲ ಪೀಠದ ಬ್ರಹ್ಮಾನಂದ ಗುರೂಜಿ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯಲ್ಲಿರುವ ಮೆಳೆಕೋಟೆಯಲ್ಲಿನ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ಮಹಿಳೆಯೊಬ್ಬರಿಗೆ ಸೈಟ್ ಕೊಡಿಸುವುದಾಗಿ ಹೇಳಿ ಹಣ ಪಡೆದು ಸೈಟ್ ಕೊಡಿಸದೇ ಹಣ ವಾಪಸ್ ಕೊಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಗೈದೆ.

ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಬ್ರಹ್ಮಾನಂದ ಸ್ವಾಮೀಜಿಯವರ ನಿವಾಸದ ಸಮೀಪವೇ ಮಹಿಳೆ ಹಾಗೂ ಆಕೆಯ ಪತಿ ವಾಸವಾಗಿದ್ದರು. ದಂಪತಿ ಸೈಟ್ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸ್ವಾಮೀಜಿ ತನ್ನ ಪರಿಚಯದವರ ಬಳಿಯಿಂದ 13 ಲಕ್ಷದ ಸೈಟ್ ನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಹೇಳಿದ್ದರು. ಇದನ್ನ ನಂಬಿ ಮಹಿಳೆ 5 ಲಕ್ಷ ಹಣವನ್ನು ಸ್ವಾಮೀಜಿ ಅಡ್ವಾನ್ಸ್ ನೀಡಿದ್ದಳು. ಆ ಹಣವನ್ನು ಸ್ವಾಮೀಜಿ ಬೇರೆಯವರಿಗೆ ಕೊಟ್ಟಿದ್ದರಂತೆ. ಒಂದು ವರ್ಷ ಕಳೆದರು ಸೈಟ್ ನೀಡದೇ ಸತಾಯಿಸುತ್ತಿದ್ದಾಗ ಮಹಿಳೆ ಅಡ್ವಾನ್ಸ್ ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾಳೆ. ಅದಕ್ಕೆ ಸ್ವಾಮೀಜಿ ಹಣ ಬೇಕಾದರೆ ತನ್ನ ರೂಮಿಗೆ ಬರುವಂತೆ ಮಂಚಕ್ಕೆ ಕರೆದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಅಲ್ಲದೇ ಸ್ವಾಮೀಜಿ ಮಹಿಳೆಯೊಂದಿಗೆ ಕೆಟ್ಟದಾಗಿ ಮಾತನಾಡುತ್ತಿರುವ ಆಡಿಯೋ ಕೂಡ ವೈರಲ್ ಆಗಿದೆ. ನಿನಗೆ ಹಣ ಬೇಕು, ನನಗೆ ಮಜಾ ಬೇಕು. ನಾನ್ಯಾಕೆ ಫ್ರೀಯಾಗಿ ಹಣ ಕೊಡಲಿ ನೀನು ರೂಮಿಗೆ ಬಂದರೆ ಕೊಡುತ್ತೇನೆ ಎಂದು ಸ್ವಾಮೀಜಿ ನಾಲಿಗೆ ಹರಿಬಿಟ್ಟಿದ್ದಾನೆ. ಸ್ವಾಮೀಜಿ ಪದೇ ಪದೇ ಮಹಿಳೆಗೆ ಕರೆ ಮಾಡಿ ಕರೆದಿದ್ದು, ಮಹಿಳೆ ಸ್ವಾಮೀಜಿ ಫೋನ್ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಸ್ವಾಮೀಜಿ ಮಹಿಳೆಯ ಮನೆಗೆ ಬಂದು ಕಿರುಕುಳ ನೀಡಿದ್ದು, ರೆಕಾರ್ಡ್ ಡಿಲಿಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಡಿಲಿಟ್ ಮಾಡಿದರೆ 50 ಸಾವಿರ ಹಣ ಕೊಡುವುದಾಗಿ ಹೇಳಿದ್ದಾರಂತೆ. ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬ್ರಹ್ಮಾನಂದ ಗುರೂಜಿ ಮಹಿಳೆ ವಿರುದ್ಧ ಪ್ರತಿ ದೂರು ನೀಡಿದ್ದಾರೆ.

Home add -Advt

Related Articles

Back to top button