ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾರಾಯಣ ಗುರುಗಳ ಜೀವನಾದರ್ಶ ನಮಗೆ ದಾರಿದೀಪ ಆಗಬೇಕು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಬೇಕೆಂದು ಮುಜರಾಯಿ, ಮೀನುಗಾರಿಕೆ ಹಾಗೂ ಜಲಸಾರಿಗೆ, ಬಂದರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಮಾಣಿಕಬಾಗ್ ದಿಗಂಬರ ಜೈನ್ ಬೋರ್ಡಿಂಗ್ ಸಭಾಭವನದಲ್ಲಿ ರವಿವಾರ (೨೦ ರಂದು) ಬಿಲ್ಲವರ ಅಸೋಸಿಯೇಶನ್ ಹಾಗೂ ಶಿವಗಿರಿ ಸೊಸೈಟಿ ವತಿಯಿಂದ ಆಯೋಜಿಸಲಾಗಿದ್ದ, ೧೬೫ ನೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯ ನಿಮಿತ್ತ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡಿಗೆ ಶಾಂತಿ, ಜ್ಞಾನವನ್ನು ಉಣಬಡಿಸಿದವರು ನಾರಾಯಣ ಗುರುಗಳು. ಇಂದಿನ ಯುವಕರು ಜ್ಞಾನದೆಡೆಗೆ ಸಾಗಬೇಕು. ಆದರೆ, ಜಪ, ತಪಗಳಲ್ಲಿ ಕಾಲಕಳೆಯುತ್ತಿದ್ದಾರೆ. ಅಜ್ಞಾನದಿಂದ ಎನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಧರ್ಮದ ಮೂಲಕ ಶಿಕ್ಷಣ ಕ್ರಾಂತಿ ಸೃಷ್ಟಿಸಿದವರು ನಾರಾಯಣ ಗುರು. ಸಕಲ ಜೀವಿಗೂ ಮೇಲು, ಕೀಳು, ಜಾತಿ, ಧರ್ಮ ಇದೆ. ಆದರೆ, ಅಳೆದು -ತೂಗುವ ಕಾರ‍್ಯಗಳಾಗಬಾರದು. ನಾರಾಯಣ ಗುರುಗಳಿಂದ ಅಕ್ಷರ ಅಭ್ಯಾಸ, ಬದುಕಿನ ಮತ್ತೊಂದು ಮಗ್ಗಲು ಬಂದಿದೆ. ಸಮಾಜ ಬದಲಾವಣೆ ಕಂಡಿದೆ. ನಾರಾಯಣ ಗುರುಗಳ ದಾರ್ಶನಿಕರ ಸಂದೇಶ ಇಡೀ ಸಮಾಜಕ್ಕೆ ಶಕ್ತಿ ಕೊಡಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ಹುಟ್ಟಿ ಸಮಾಜದ ಅಭಿವೃದ್ಧಿಗೆ , ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಪ್ರಯತ್ನಿಸಿದ್ದಾರೆ ಎಂದರೆ ಅದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತ್ರ. ಅಲ್ಲದೆ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಸಹ ಬಿಲ್ಲವರ ಅಸೋಸಿಯೇಷನ್ ಮಾಡುತ್ತಿದೆ. ನಿಮ್ಮ ಉತ್ತಮ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದರು.
ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ಕಾಣದ ದೇವರ ಪೂಜೆಗಿಂತ ಜೀವಂತ ಇರುವ ಮನುಷ್ಯನನ್ನು ಪ್ರೀತಿಸಿ ಇದೇ ನಿಜವಾದ ಧರ್ಮ, ಕರ್ಮಗೈದು ಧರ್ಮದೆಡೆಗೆ ಸಾಗಿದರೆ ಫಲ ಸಿಗಲು ಸಾಧ್ಯವಿಲ್ಲ. ನಿನ್ನ ಕಾಯಕದಿಂದ ಸಕಲವನ್ನು ಪಡೆದುಕೊಳ್ಳಬೇಕೆಂದರು.
ಸಕಲ ಜೀವಿಗಳ ಜತೆ ಬೆರೆತು, ಶಾಂತಿಗಾಗಿ ಜ್ಞಾನ ಮಾಡಿದರೆ ಸಕಲ ನಿಮ್ಮದಾಗುತ್ತದೆ. ೨೧ ನೇ ಶತಮಾನದ ರಾಕೇಟ್ ದಿನಗಳಲ್ಲಿ ಅಜ್ಞಾನವನ್ನು ಮೈಗೂಡಿಸಿಕೊಂಡಿದೆ. ತಂತ್ರಜ್ಞಾನ ಯುವಕರು ಅಂತತ್ರರಾಗುತ್ತಿದ್ದಾರೆ. ಎಲ್ಲವನ್ನು ಬಿಟ್ಟು ಕೆಲಸದಲ್ಲಿ ಶ್ರಮಿಸಬೇಕಿದೆ ಎಂದರು.
೨೦೨೦ ರ ಒಳಗಾಗಿ ಬೆಳಗಾವಿಯಲ್ಲಿ ಹಾಗೂ ಉ.ಕರ್ನಾಟಕದಲ್ಲಿ ನಾರಾಯಣ ಗುರುಗಳ ಸಭಾಭವನಗಳನ್ನು ನಿರ್ಮಾಣವಾಗಬೇಕಿದೆ. ಉತ್ತರ ಕರ್ನಾಟಕದಲ್ಲಿ ನಾರಾಯಣ ಗುರುಗಳು ಪರಿಚಯಸುವ ಪ್ರಯತ್ನವಾಗಬೇಕು.
ಬಿಲ್ಲವರ ನಾರಾಯಣನರ ಬಗ್ಗೆ ಲೋಕಕ್ಕೆ ಸಾರಬೇಕಿದೆ. ಅವರ ಸಾಹಿತ್ಯ , ತತ್ವವಾಗಬೇಕಿದೆ. ಮನೆಯ ಗೃಹಪ್ರವೇಶಕ್ಕೆ ಹಾಗೂ ಹುಟ್ಟಿದ ಮಗುವಿಗೆ ನಾರಾಯಣ ಬಗ್ಗೆ ತಿಳಿಸಿ, ಜ್ಞಾನವನ್ನು ಸಂಪಾದಿಕೊಳ್ಳಬೇಕಾಗಿದೆ. ಅಂದಾಗ ನಾಡಿನಲ್ಲಿ ಸಂಸ್ಕೃತಿ ನೆಲೆಯೂರಲು ಸಾಧ್ಯ. ಒಳ್ಳೆಯತನವನ್ನು ಬಯಸಿ ಧರ್ಮ ಸಂರಕ್ಷಣೆಗಾಗಿ ನಿಂತರು ಬಿಲ್ಲವರು ಸಮಾಜದವರು ಅದಕ್ಕಾಗಿ ಈ ನಾಡಿನ ತಂದೆ ನಾರಾಯಣ ಗುರುಗಳು ಎಂದರು.
ಕಪಿಮುಷ್ಠಿಯಲ್ಲಿರುವ ಅಜ್ಞಾನ ಅಳಿಸಿ, ಮೂಡನಂಬಿಕೆಯ ಭ್ರಾಂತಿಯನ್ನು ತುಳಿದು ಬಿಲ್ಲವರು ಸಮಾಜದ ಏಳಿಗೆಗಾಗಿ ಶ್ರಮಿಸಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷ ಸುನಿಲ್ ಪೂಜಾರಿ, ಶಿವಗಿರಿ ಕೋ ಆಪರೇಟಿವ್ ಸೊಸೈಟಿ ಸುಜನ್ ಕುಮಾರ್, ಚಂದ್ರಶೇಖರ ಎಸ್ ಪೂಜಾರಿ, ಚಂದ್ರ ಎಚ್ ಪೂಜಾರಿ, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರು ವಿಜಯ್ ಸಾಲಿಯಾನ್, ಸುಂದರ ಕೋಟ್ಯಾನ್, ಸುಧೀರ್ ಕುಮಾರ್ ಸಾಲಿಯಾನ್, ಮಹಿಳಾ ಘಟಕದ ಸಂಚಾಲಕರು ಚಂದ್ರಾವತಿ ಪೂಜಾರಿ ಅಧ್ಯಕ್ಷರು,ಸಂತೋಷ್ ಪೂಜಾರಿ, ನಾರಾಯಣ ನಾಯಕ, ಗಣೇಶ್ ಪೂಜಾರಿ ಹಾಗೂ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ