ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ಚಾಮಿಯವರು ಪ್ರಹ್ಲಾದ ಜೋಶಿ ಹಾಗೂ ಇಡೀ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ಅವರು ಕೂಡಲೆ ಕ್ಷಮೆ ಕೋರಬೇಕು ಎಂದು ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದವರು ಬೃಹತ್ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಸರ್ಕಲ್ ನಲ್ಲಿ ಕುಮಾರಸ್ವಾಮಿಯವರ ಭಾವಚಿತ್ರ ದಹನ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದೇವೆಗೌಡರು ಮುಖ್ಯಮಂತ್ರಿ ಪ್ರಧಾನಮಂತ್ರಿ ಆಗುವಾಗ ಯಾವ ಸಮಾಜದವರೂ ಅದನ್ನು ವಿರೋಧಿಸಲಿಲ್ಲ ಆದರೆ, ಪ್ರಹ್ಲಾದ ಜೋಶಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದಾಗ ಕುಮಾರಸ್ವಾಮಿಯವರು ವಿರೋಧ ಮಾಡುತ್ತಿದ್ದಾರೆ. ಇದು ಅವರ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದು ಸಮಾಜದ ಮುಖಂಡರು ಹೇಳಿದರು.
ಚುನಾವಣೆ ಸಮಯದಲ್ಲಿ ಕುಮಾರಸ್ವಾಮಿಯವರು ಬ್ರಾಹ್ಮಣ ಸಮುದಾಯದ ವಿರೋಧಿ ಹೇಳಿಕೆ ನೀಡಿರುವ ಕಾರಣ ಏನು ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದೇಪದೆ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಸಮುದಾಯದ ಸೌಮ್ಯತೆಯ ದುರ್ಲಾಭ ಪಡೆಯುತ್ತಿದ್ದಾರೆ. ಈ ಇಬ್ಬರೂ ನಾಯಕರು ಇನ್ನು ಮುಂದೆ ಬ್ರಾಹ್ಮಣ ಸಮುದಾಯದ ನಿಂದನೆ ಬಿಟ್ಟು ಗೌರವಯುತ ರಾಜಕಾರಣ ಮಾಡಬೇಕು ಎಂದರು.
*ಪೇಶ್ವೆ ವಂಶಸ್ಥರು ಬಿಎಸ್ ವೈಗೆ ಅಧಿಕಾರ ನಡೆಸಲು ಬಿಡಲಿಲ್ಲ; ಮತ್ತೆ ಕಿಡಿಕಾರಿದ ಕುಮಾರಸ್ವಾಮಿ*
https://pragati.taskdun.com/h-d-kumaraswamyb-s-yedyurappaprahlad-joshiuttara-kannada/
*ನಾನು ಕೈ ಜೋಡಿಸದಿದ್ದರೆ BSY ರಾಜಕೀಯವೇ ಅಂತ್ಯವಾಗ್ತಿತ್ತು; ವಿಜಯೇಂದ್ರಗೆ ತಿರುಗೇಟು ನೀಡಿದ ಹೆಚ್.ಡಿಕುಮಾರಸ್ವಾಮಿ*
https://pragati.taskdun.com/h-d-kumaraswamyb-s-yedyurappab-y-vijayendrareaction/
*BJPಯಲ್ಲಿ ಯಡಿಯೂರಪ್ಪ ಕಡೆಗಣನೆ; ಸ್ಪಷ್ಟನೆ ನೀಡಿದ ಬಿಎಸ್ ವೈ*
https://pragati.taskdun.com/b-s-yedyurappareactionbjpsideline/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ