Latest

ಬ್ರೆಜಿಲ್ ಗೆ ಕೊರೊನಾ ಲಸಿಕೆ ನೀಡಿದ ಭಾರತ; ಸಂಜೀವಿನಿ ಹೊತ್ತು ತಂದ ಆಂಜನೇಯನಿಗೆ ಹೋಲಿಸಿದ ಅಧ್ಯಕ್ಷ ಜೇರ್

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತ ಬ್ರೆಜಿಲ್ ಗೆ 2 ಮಿಲಿಯನ್ ಕೊರೊನಾ ವೈರಸ್ ಲಸಿಕೆಯನ್ನು ತಲುಪಿಸಿದ್ದು, ಈ ಹಿನ್ನೆಲೆಯಲ್ಲಿ ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೋ, ಸಂಜೀವಿನಿ ಹೊತ್ತು ತಂದ ಆಂಜನೇಯನಿಗೆ ಹೋಲಿಸಿ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷ್ಮಣನಿಗೆ ಹನುಮಂತ ಜೀವದಾನ ಮಾಡಿದಂತೆ ಭಾರತ ಕೊರೊನಾ ಲಸಿಕೆಯನ್ನು ಬ್ರೆಜಿಲ್ ಗೆ ಕಳುಹಿಸಿದ್ದು, ನಮ್ಮ ಪ್ರಜೆಗಳ ಜೀವ ಉಳಿಸಲಾಗಿದೆ ಎಂದು ಸ್ಪೆಷಲ್ ಫೋಟೋ ಒಂದನ್ನು ಟ್ವೀಟ್ ಮಾಡಿ ಬ್ರೆಜಿಲ್ ಅಧ್ಯಕ್ಷ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಈ ಫೋಟೋದಲ್ಲಿ ಹನುಮಂತ ಸಂಜೀವೀನಿ ಹೊತ್ತು ಭಾರತದಿಂದ ಬ್ರೆಜಿಲ್ ಗೆ ಜಿಗಿಯುತ್ತಿದ್ದಾನೆ. ಪರ್ವತ ಹೋಲುವ ರೀತಿಯಲ್ಲಿ ಲಸಿಕೆ ಮತ್ತು ಸಿರೀಂಜ್ ಗಳಿದ್ದು ಧನ್ಯಾವದ ಭಾರತ ಎಂದು ಟ್ವೀಟ್ ಮಾಡಿದ್ದಾರೆ. ಈ ಫೋಟೋ ಇದೀಗ ಭಾರೀ ವೈರಲ್ ಆಗಿದೆ,

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button